ಧಾರವಾಡ: ಚಿಂಗ್ಸ್‌ಚ್ವಾಂಗ್ ಮಮ್ಮೋಸ್ ಮಾರುತ್ತಿದ್ದವ “ಮಲಗಿದಲೇ ಸಾವು”- ಇನ್ನುಳಿದ ಆರು ಜನ ಆಸ್ಪತ್ರೆಗೆ: ನಿಗೂಢ ಘಟನೆ…
ಕಾರ್ಮಿಕನ ನಿಗೂಢ ಸಾವು; ಆರು ಮಂದಿ ಅಸ್ವಸ್ಥ
ಧಾರವಾಡ: ನಗರದ ಸಾಯಿ ದರ್ಶಿನಿ ಲೇಔಟ್‌ನಲ್ಲಿ ನೇಪಾಳ ಮೂಲದ ವ್ಯಕ್ತಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದು, ಅವರೊಂದಿಗೆ ಉಳಿದುಕೊಂಡಿದ್ದ ಇತರ ಆರು ಮಂದಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ಘಟನೆಯ ವಿವರ:
ಮೃತ ವ್ಯಕ್ತಿಯನ್ನು ನೇಪಾಳ ಮೂಲದ ಬಿಬೇಕ್ (40) ಎಂದು ಗುರುತಿಸಲಾಗಿದೆ. ಇವರು ನಗರದ ಕೆ.ಸಿ. ಪಾರ್ಕ್ ಬಳಿ ಇರುವ ‘ಚಿಂಗ್ಸ್‌ಚ್ವಾಂಗ್ ಮೊಮೋಸ್’ ಫಾಸ್ಟ್ ಫುಡ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳಿದ್ದ ಏಳು ಜನರ ತಂಡ ಊಟ ಮಾಡಿ ಮಲಗಿತ್ತು. ಇಂದು ಬೆಳಿಗ್ಗೆ ನೋಡಿದಾಗ ಬಿಬೇಕ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಆಸ್ಪತ್ರೆಗೆ ದಾಖಲು:
ಬಿಬೇಕ್ ಜೊತೆಗಿದ್ದ ಉಳಿದ ಆರು ಮಂದಿಯೂ ಅಸ್ವಸ್ಥಗೊಂಡಿದ್ದು, ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
