ಬಳ್ಳಾರಿ ಎಸ್ಪಿ ಪವನ ನೆಜ್ಜೂರ ಸಸ್ಪೆಂಡ್- ಜ್ವಾಯಿನ್ ಆದ ಕೆಲವೇ ಗಂಟೆಗಳಲ್ಲಿ ಗಲಾಟೆ…!!!
ಬೆಂಗಳೂರು : ಬಳ್ಳಾರಿಯಲ್ಲಿ ನಡೆದ ಗುಂಪುಘರ್ಷಣೆ ಹಾಗೂ ಓರ್ವನ ಸಾವಿನ ಹಿನ್ನೆಲೆಯಲ್ಲಿ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರ್ ಅಮಾನತುಗೊಳಿಸಲಾಗಿದೆ.

ಗಲಭೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲು ವಿಫಲರಾದ ಆರೋಪ ಮತ್ತು ಪರಿಸ್ಥಿತಿ ಕುರಿತು ಮೇಲಧಿಕಾರಿಗಳಿಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡಲು ವಿಫಲರಾದ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ.
ಡಿಐಜಿ ವರ್ತಿಕಾ ಕಟಿಯಾರ ವರದಿ ಆಧರಿಸಿ ಎಸ್ಪಿಯನ್ನು ಅಮಾನತುಗೊಳಿಸಲಾಗಿದೆ.
