ಕುಂದಗೋಳ: ವಿದ್ಯಾರ್ಥಿಗಳ “ಅನ್ನದಕ್ಕಿ” ನಾಪತ್ತೆ- ಕ್ರಮದ ಮಾತೇ ಇಲ್ಲ…!!!
ಕುಂದಗೋಳ: ವ್ಯವಸ್ಥೆ ಯಾವ ಮಟ್ಟಕ್ಕೆ ಹೋಗುತ್ತಿದೆ ಎಂಬುದನ್ನ ಸಾಕ್ಷಿ ಸಮೇತ ವಿವರಿಸುವ ಘಟನೆಯೊಂದು ತಾಲ್ಲೂಕಿನ ಮತ್ತಿಗಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದ್ದು, ಈಗಲೂ ತೇಪೆ ಹಚ್ಚುವ ಕಾರ್ಯ ಮುಂದುವರೆದಿದೆ.
ಮೊದಲು ಇಲ್ಲಿನ ತಹಶೀಲ್ದಾರ ಸಾಹೇಬ್ರು ನೀಡಿರುವ ಹೇಳಿಕೆಯನ್ನ ಕೇಳಿ ಬಿಡಿ…
ವಿದ್ಯಾರ್ಥಿಗಳ ಹಸಿವು ನೀಗಿಸಬೇಕಿದ್ದ ಅಕ್ಕಿ ದಾಸ್ತಾನಿನಲ್ಲಿ ಬೃಹತ್ ಪ್ರಮಾಣದ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿರುವುದನ್ನ ಸ್ವತಃ ಕುಂದಗೋಳ ತಹಶೀಲ್ದಾರ್ ರಾಜು ಮಾವರಕರ್ ಅವರೇ ಹೇಳಿದ್ದಾರೆ.
ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ತಹಶೀಲ್ದಾರ್ ರಾಜು ಮಾವರಕರ್ ಅವರು, ದಾಸ್ತಾನು ಕೊಠಡಿಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ಕೆಎಫ್‌ಸಿಎಸ್‌ಸಿ ಗೋದಾಮಿನಿಂದ ಸರಬರಾಜಾಗಿದ್ದ ಅಕ್ಕಿಯಲ್ಲಿ ತಲಾ 50 ಕೆಜಿ ತೂಕದ 78 ಮೂಟೆಗಳು ನಾಪತ್ತೆಯಾಗಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಅಕ್ಕಿ ನಾಪತ್ತೆಯ ಕುರಿತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗ ತನಿಖಾ ವರದಿಯನ್ನು ಸಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.
ಸೋಜಿಗವೇಂದರೆ, ಇವರು ಬಂದು ಹೋದ ಮೇಲೆ ಅಕ್ಕಿ ಮೂಟೆ ಮರಳಿವೆಯಂತೆ. ಅದನ್ನ ಅವರು ಹೋಗಿ ನೋಡಿಲ್ವಂತೆ. ಹೆಂಗಿದೆ ನೋಡಿ ಅಸಲಿ ಕಥೆ.
ನಾಪತ್ತೆಯಾಗಿದೆ ಎಂಬ ವರದಿ ನೀಡಿದ ಮೇಲೂ ಯಾರ ಮೇಲೆ ಕ್ರಮವಿಲ್ಲ. ಈಗ ಅದೇ ರಾಗ… ಅದೇ ಹಾಡು… ಇದಪ್ಪ ಧಾರವಾಡ ಜಿಲ್ಲೆಯ ವ್ಯವಸ್ಥೆ.
