Video ವೈರಲ್- ಧಾರವಾಡದ ಕವಲಗೇರಿ ಮಠದಲ್ಲಿ “ಸ್ವಾಮೀಜಿ ಬೆತ್ತಲೆ ಮಸಾಜ್”- ಇನ್ನೂ ಬೆತ್ತಲಾಗಬೇಕಿದೆ “ಬ್ಲ್ಯಾಕ್ ಮೇಲರ್ಸ್” ಮುಖವಾಡ..!!!
ಧಾರವಾಡ: ಮಠದ ಆವರಣದ ಕೋಣೆಯೊಂದರಲ್ಲಿ ಬೆತ್ತಲೆಯಾಗಿ ಮಹಿಳೆಯೊಬ್ಬಳ ಕೈಯಿಂದ ಮಸಾಜ್ ಮಾಡಿಸಿಕ್ಕೊಂಡ ಸ್ವಾಮೀಜಿಯೋರ್ವರ ವೀಡಿಯೋ ವೈರಲ್ ಆಗಿದ್ದು, ವೈರಲ್ ಆಗಿರುವ ಹಿನ್ನೆಲೆಯಲ್ಲಿ ಹಲವು ಅನುಮಾನಗಳು ಕಾಣತೊಡಗಿವೆ.
ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿರುವ ಶಿವಾನಂದ ಮಠದ ಸರಸ್ವತಿ ಸ್ವಾಮೀಜಿಯವರ ವೀಡಿಯೋ ವೈರಲ್ ಆಗಿದೆ.
ಮಸಾಜ್ ಮಾಡುವ ವೀಡಿಯೋ ಚಿತ್ರೀಕರಣ ಮಾಡಿದ ಐವರ ತಂಡವೊಂದು ಸ್ವಾಮೀಜಿಯವರಿಗೆ 20ಲಕ್ಷ ರೂಪಾಯಿಯ ಬೇಡಿಕೆಯಿಟ್ಟಿದ್ದರೆಂದು ಹೇಳಲಾಗಿದ್ದು, ಕೊನೆಗೆ 10 ಲಕ್ಷಕ್ಕೆ ಡೀಲ್ ಮುಗಿಸಿಕೊಂಡು 7ಲಕ್ಷ ರೂ. ಹಣವನ್ನ ಸ್ವಾಮೀಜಿಯವರಿಂದ ಪಡೆಯಲಾಗಿದೆಯಂತೆ.
ಬ್ಲ್ಯಾಕ್‌ಮೇಲ್ ಮಾಡಿ ಹಣ ಪಡೆದು ವೀಡಿಯೋ ವೈರಲ್ ಮಾಡಿದ್ದು ಯಾರೂ ಎಂಬುದು ಸ್ವಾಮೀಜಿಯವರು ಮತ್ತೂ ಗ್ರಾಮದ ಕೆಲವರಿಗೆ ಗೊತ್ತಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಬೆತ್ತಲೆಯಾದ ಸ್ವಾಮೀಜಿಯವರು ಹಣ ಪಡೆದುಕೊಂಡವರನ್ನ ಬೆತ್ತಲೆ ಮಾಡುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.
