“ಪಿಎಸ್ಐ ಕನಸು” ಧಾರವಾಡದ ರೇಲ್ವೆ ಹಳಿಯಲ್ಲಿ “ಎರಡು ತುಂಡು”…
ಧಾರವಾಡ: ನಗರದಲ್ಲಿ ವಿದ್ಯಾಭ್ಯಾಸ ಮಾಡಿ ಪಿಎಸ್ಐ ಆಗಿ ಬದುಕುವ ಕನಸು ಕಂಡಿದ್ದ ಯುವತಿಯೋರ್ವಳು ರೇಲ್ವೆ ಹಳಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಡೆದಿದೆ.
ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲೂಕಿನ ದಮ್ಮೂರ-ಕಗ್ಗಲು ಗ್ರಾಮದ ಫಲ್ಲವಿ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು ದೇಹವೂ ಎರಡು ತುಂಡಾಗಿದೆ.
ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ನೂರಾರು ಯುವಕರು ಸ್ಥಳದಲ್ಲಿ ಜಮಾಯಿಸಿದ್ದರು. ದೇಹವನ್ನ ಕಿಮ್ಸಗೆ ರವಾನೆ ಮಾಡಿದ್ದು, ಪಾಲಕರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
