“KIADB ಹಗರಣ”ದಲ್ಲಿ ‘ಮಂತ್ರಿ’- ಹೊಸ ಬಾಂಬ್ ಹಾಕಿದ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ…!!!
ಧಾರವಾಡ: ಬಹುಕೋಟಿ ಹಗರಣವನ್ನ ಬಯಲು ಮಾಡಿದ ನಂತರವೂ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದರ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಯ ಮಂತ್ರಿಯವರು ಇರಬಹುದೆಂದು ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಹೊಸದೊಂದು ಮಾಹಿತಿಯನ್ನು ಹೊರ ಹಾಕಿದ್ದಾರೆ.
ಈ ಕುರಿತು ಬಸವರಾಜ ಕೊರವರ ಅವರ ಹೇಳಿಕೆ ಇಲ್ಲಿದೆ ನೋಡಿ..
ಇಡೀ ಪ್ರಕರಣದ ಬಗ್ಗೆ ಜನಜಾಗೃತಿ ನೀಡಿರುವ ವಿವರ ಇಲ್ಲಿದೆ ನೋಡಿ:
ವಿಷಯ: ಧಾರವಾಡದ ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯಲ್ಲಿ ೨೦೨೧-೨೨ ರಲ್ಲಿ ಆದ ಬಹುಕೋಟಿ ಹಗರಣದಲ್ಲಿ ಭಾಗಿಯಾದಂತಹ ವಿಶೇಷ ಜಿಲ್ಲಾಧಿಕಾರಿಯಾದ ಶ್ರೀ ದಯಾನಂದ ಭಂಡಾರಿ ಮತ್ತು ಹಣಕಾಸು ನಿಯಂತ್ರಣಾಧಿಕಾರಿ ಶ್ರೀಮತಿ ಎನ್. ವಾಣಿ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಸಂಬಂಧಪಟ್ಟ ಇಲಾಖೆಯವರು ಇಲಾಖಾ ತನಿಖೆ ಜರುಗಿಸಿ ತಕ್ಷಣದಿಂದ ಇವರನ್ನು ಅಮಾನತ್ತುಗೊಳಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಈ ಪತ್ರಿಕಾ ಪ್ರಕಟಣೆ ಮೂಲಕ ಮನವಿ.
• ಧಾರವಾಡ ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯಲ್ಲಿ ೨೦೨೧-೨೨ ರಲ್ಲಿ ಜರುಗಿದ ಬಹುಕೋಟಿ ಹಗರಣ ಆಗಿದ್ದರಲ್ಲಿ ಆಗಿನ ವಿಶೇಷ ಜಿಲ್ಲಾಧಿಕಾರಿಯಾದ ಶ್ರೀ ದಯಾನಂದ ಭಂಡಾರಿ, ಹಣಕಾಸು ನಿಯಂತ್ರಣಾಧಿಕಾರಿಯಾದ ಶ್ರೀಮತಿ ಎನ್. ವಾಣಿ, ವಿಶೇಷ ಭೂಸ್ವಾಧೀನಾಧಿಕಾರಿಯಾದ ಶ್ರೀ ವ್ಹಿ.ಡಿ. ಸಜ್ಜನ, ಮ್ಯಾನೇಜರ್ ಶಂಕರ ತಳವಾರ, ಮಹಾದೇವಪ್ಪ ಶಿಂಪಿ ಹಾಗೂ ಕೇಂದ್ರ ಕಚೇರಿಯ ಆಡಿಟ್ ಶಾಖೆಯ ಸಹಾಯಕ ಕಾರ್ಯದರ್ಶಿ ಮಂಜುನಾಥ ಮುದಕವಿ ಈ ಹಿರಿಯ ಅಧಿಕಾರಿಗಳು ಮತ್ತು ಇನ್ನುಳಿದ ಕೇಂದ್ರ ಕಚೇರಿಯ ಮತ್ತು ಧಾರವಾಡ ಕಚೇರಿಯ ಸಿಬ್ಬಂದಿಗಳು ಸೇರಿಕೊಂಡು ಹುಬ್ಬಳ್ಳಿಯ ಐ.ಡಿ.ಬಿ.ಐ. ಬ್ಯಾಂಕಿನ ಸಿಬ್ಬಂದಿಗಳ ಸಹಕಾರದಿಂದ ಬಹುಕೋಟಿ ಹಗರಣ ಅಂದರೆ ಸುಮಾರು ೮೪ ಕೋಟಿಗೂ ಅಧಿಕ ಅವ್ಯವಹಾರ ಮಾಡಿದ್ದು, ಕೆಐಎಡಿಬಿ ಮಂಡಳಿಗೆ ಅಂದರೆ ಸರಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ವಂಚಿಸಿರುವ ಬಗ್ಗೆ ನಾವು ಸಾಕ್ಷಿ ಸಮೇತ ಮಾನ್ಯ ಮುಖ್ಯಮಂತ್ರಿಗಳಿಗೆ, ಸಂಬಂಧಿಸಿದ ಇಲಾಖೆಯ ಸಚಿವರಿಗೆ ಹಾಗೂ ಸಂಬAಧಪಟ್ಟ ಇಲಾಖಾ ಮುಖ್ಯಸ್ಥರುಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು, ಧಾರವಾಡ ರವರ ಮುಖಾಂತರ ದಿನಾಂಕ: ೧೬-೧೨-೨೦೨೩ ರಲ್ಲಿಯೇ ದೂರು ನೀಡಿದ್ದು ಇರುತ್ತದೆ.
• ಸದರಿ ಹಗರಣದ ಬಗ್ಗೆ ಹಲವಾರು ಬಾರಿ ಮನವಿ ಮಾಡಿದಾಗ್ಯೂ ಕೂಡಾ ಸ್ಪಂದಿಸದೇ ಇದ್ದಾಗ ತಮ್ಮ ಮಾದ್ಯಮಗಳ ಮುಖೇನ ಪ್ರಕರಣದ ಸತ್ಯಾಂಶವನ್ನು ಬಿಚ್ಚಿಟ್ಟಾಗ ಮಾತ್ರ ಎಚ್ಚೆತ್ತುಕೊಂಡು ಕೇಂದ್ರ ಕಚೇರಿಯಿಂದ ತನಿಖೆಗೆ ಆದೇಶಿಸಿದ್ದು ಇರುತ್ತದೆ. ಸದರಿ ತನಿಖೆಯಲ್ಲಿ ಕೇವಲ ರೂ.೧೯,೯೯,೫೫,೦೦೦/- ಕೋಟಿ ಅವ್ಯಹಾರ ಆಗಿರುವುದಾಗಿ ವರದಿ ನೀಡಿದ್ದರಿಂದ ಈ ಕುರಿತಂತೆ ವಿದ್ಯಾಗಿರಿ ಪೋಲೀಸ್ ಠಾಣೆ, ಧಾರವಾಡ ಇವರಲ್ಲಿ ಪ್ರಕರಣ ದಾಖಲಾಗಿ ನಂತರ ಇದು ಬಹುಕೋಟಿ ಹಗರಣವಾದ್ದರಿಂದ ಈ ಪ್ರಕರಣವು ಸಿ.ಐ.ಡಿ.ಸಂಸ್ಥೆಗೆ ವಹಿಸಿಕೊಟ್ಟಿದ್ದು ಇರುತ್ತದೆ.
• ನಂತರ ತನಿಖೆ ಕೈಗೊಂಡ ಸಿ.ಐ.ಡಿ. ಸಂಸ್ಥೆಯಿಂದಲೂ ಕೂಡಾ ಸರಿಯಾಗಿ ಆರೋಪಿಗಳನ್ನು ಪತ್ತೇ ಹಚ್ಚುವಲ್ಲಿ ಸಿ.ಐ.ಡಿ. ಸಂಸ್ಥೆಯು ವಿಫಲವಾಗಿದ್ದು, ತನಿಖಾಧಿಕಾರಿಗಳು ಯಾವುದೋ ವ ಯಾರದೋ ಆಮೀಷಕ್ಕೆ ಒಳಗಾಗಿ ನಿಜವಾದ ಆರೋಪಿಗಳನ್ನು ಬಂಧಿಸಲು ವಿಫಲರಾದ ಹಿನ್ನಲೆಯಲ್ಲಿ ಸಿ.ಐ.ಡಿ. ಸಂಸ್ಥೆಯು ನಡೆಸಿದ ತನಿಖೆಯ ಸಂಪೂರ್ಣ ಲೋಪದೋಷಗಳನ್ನು ೨೮ ಪುಟಗಳ ಪತ್ರದಲ್ಲಿ ಮಾನ್ಯ ಪೋಲೀಸ್ ಮಹಾನಿರ್ದೇಶಕರು, (ಸಿ.ಐ.ಡಿ.) ಆರ್ಥಿಕ ಅಪರಾಧಗಳು ಮತ್ತು ವಿಶೇಷ ಘಟಕ, ಬೆಂಗಳೂರು ಇವರಿಗೂ ಕೂಡಾ ಖುದ್ದಾಗಿ ಬೇಟಿಯಾಗಿ ದಿನಾಂಕ: ೧೫-೧೨-೨೦೨೩ ರಂದು ಪ್ರತ್ಯೇಕ ದೂರನ್ನು ನೀಡಲಾಗಿರುತ್ತದೆ.
• ಮಾನ್ಯ ಸಿ.ಇ.ಓ. ರವರನ್ನು ದಿನಾಂಕ: ೦೨-೦೨-೨೦೨೪ ರಂದು ಖುದ್ದು ಭೇಟಿ ಮಾಡಿ ರೂ.೧೯,೯೯,೫೫,೦೦೦/- ಕೋಟಿ ಹಗರಣ ಅಲ್ಲದೇ ಇನ್ನೂ ೧೪ ಪ್ರಕರಣಗಳಲ್ಲಿ ರೂ.೨೮,೭೯,೬೩,೪೫೩/- ಗಳ ಹಗರಣವು ಕೇವಲ ಐ.ಡಿ.ಬಿ.ಐ. ಬ್ಯಾಂಕ್ನಿAದ ಆಗಿದೆ ಅಂತಾ ಖುದ್ದು ಸಾಕ್ಷಿ ಸಮೇತ ದೂರು ನೀಡಿ ಒಂದು ವರ್ಷ ೧೦ ತಿಂಗಳು ಗತಿಸಿದರೂ ಕೂಡಾ ಈವರೆಗೆ ಇವರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
• ಈ ಬಹುಕೋಟಿ ಹಗರಣದಲ್ಲಿ ಶ್ರೀ ದಯಾನಂದ ಭಂಡಾರಿ ಮತ್ತು ಶ್ರೀಮತಿ ಎನ್. ವಾಣಿ ಇವರು ಕೇಂದ್ರ ಕಚೇರಿಯಿಂದ ಸರಕಾರದ ಹಣವನ್ನು ದುರುಪಯೋಗ ಮಾಡಿಕೊಳ್ಳುವ ಉದ್ದೇಶದಿಂದಲೇ ಬೇಕಾಯ್ದೆಶೀರ ಹಣ ಬಿಡುಗಡೆ ಮಾಡಿದ್ದು ಈ ಹಣ ಬಿಡುಗಡೆಯ ನಂತರವೇ ಈ ರೀತಿ ಇಷ್ಟೊಂದು ಹಗರಣ ಆಗಿದ್ದರಿಂದ ಇವರ ಪಾತ್ರವು ಈ ಹಗರಣದಲ್ಲಿ ಬಹುಮುಖ್ಯವಾಗಿದೆ ನಾವು ಇವರ ಮೇಲೆ ಕೂಡಲೇ ತನಿಖೆ ಕೈಗೊಂಡು ಸೂಕ್ತ ಕ್ರಮಕೈಗೊಳ್ಳುವಂತೆ ಕೋರಿ ಮಾನ್ಯ ಮುಖ್ಯಮಂತ್ರಿಗಳಿಗೆ, ಮಾನ್ಯ ಶ್ರೀ ಎಮ್.ಬಿ. ಪಾಟೀಲ ಬೃಹತ್ ಮತ್ತು ಮಧ್ಯಮ ಕೈಗರಿಕಾ ಸಚಿವರು ಬೆಂಗಳೂರು ಇವರಿಗೆ ಮಾನ್ಯ ಜಿಲ್ಲಾಧಿಕಾರಿಗಳು ಧಾರವಾಡ ರವರ ಮುಖಾಂತರ ದಿನಾಂಕ: ೧೬-೧೨-೨೦೨೩ ಮತ್ತು ದಿನಾಂಕ: ೩೦-೦೧-೨೦೨೪ ರಂದು ನೀಡಿದ್ದು ಇರುತ್ತದೆ.
• ಮಾನ್ಯ ಜಾರಿ ನಿರ್ದೇಶನಾಲಯ, (ಇ.ಡಿ.) ನವದೆಹಲಿ ರವರು ಸುಧೀರ್ಘ ತನಿಖೆ ಕೈಗೊಂಡು ಮಾನ್ಯ ೩ನೇ ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ ನ್ಯಾಯಾಧೀಶರು, ಮಂಗಳೂರು ರವರ ನ್ಯಾಯಾಲಯಕ್ಕೆ ಸ್ಪೇಷಲ್ ಸಿ.ಸಿ. ನಂ.: ೨೩೩/೨೦೨೪ ರಡಿ ಪ್ರಕರಣ ದಾಖಲಿಸಿ ಸಲ್ಲಿಸಿದ ಚಾರ್ಜಶೀಟ್ನ ದೃಢೀಕೃತ ಪ್ರತಿಯನ್ನು ಪಡೆದು ಅದರಲ್ಲಿನ ಅಂಶಗಳನ್ನು ಪರಿಶೀಲಿಸಿದಾಗ ಹಗರಣದ ಮೊತ್ತವು ರೂಪಾಯಿ ೭೨ ಕೋಟಿಗೂ ಅಧಿಕ ಆಗಿರುವುದಾಗಿ ಚಾರ್ಜಶೀಟ್ನಲ್ಲಿ ನಮೂದಿಸಿರುವುದು ಸ್ಪಷ್ಟವಾಗಿರುತ್ತದೆ.
• ಮಾನ್ಯ ಜಾರಿ ನಿರ್ದೇಶನಾಲಯ (ಇ.ಡಿ) ರವರ ತನಿಖೆಯಲ್ಲಿ ಹಣಕಾಸು ನಿಯಂತ್ರಣಾಧಿಕಾರಿಯಾದ ಶ್ರೀಮತಿ ಎನ್. ವಾಣಿ ಇವರನ್ನು ಆರೋಪಿ ನಂ. ೨೮ ಎಂಬುದಾಗಿ ಮತ್ತು ಶ್ರೀ ದಯಾನಂದ ಭಂಡಾರಿ ಇವರನ್ನು ಆರೋಪಿ ನಂ. ೨೯ ಹಾಗೂ ಸಿಬ್ಬಂದಿಯಾದ ಎಲ್. ಶ್ರೀನಿವಾಸ ತಂದೆ ಲೇಟ್ ಲಕ್ಕಣ್ಣ ಇವರನ್ನು ಆರೋಪಿ ನಂ. ೩೦ ಎಂಬುದಾಗಿ ದೃಢಪಡಿಸಿ ಮಾನ್ಯ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿರುತ್ತಾರೆ.
• ಶ್ರೀ ದಯಾನಂದ ಭಂಡಾರಿ ಮತ್ತು ಶ್ರೀಮತಿ ಎನ್. ವಾಣಿ ಈ ಹಿರಿಯ ಅಧಿಕಾರಿಗಳ ಪಾತ್ರವು ಬಹುಕೋಟಿ ಹಗರಣದಲ್ಲಿ ಏನಿದೆ ಎಂಬುದರ ಬಗ್ಗೆ ಎರಡನೇ ಚಾರ್ಜ ಶೀಟ್ನ ಪುಟ ಸಂಖ್ಯೆ ೧೩೫ ರಿಂದ ೧೪೦ ರವರೆಗಿನ ಪುಟಗಳಲ್ಲಿ ಸಂಪೂರ್ಣ ವಿವರಗಳೊಂದಿಗೆ ನಮೂದಿಸಿ ಖಚಿತಪಡಿಸಿದ್ದು ಇರುತ್ತದೆ.
• ಹಗರಣದಲ್ಲಿನ ಏಜೆಂಟರು ಮತ್ತು ಸಿಬ್ಬಂದಿಗಳು ತನಿಖೆ ಸಂದರ್ಭದಲ್ಲಿ ನೀಡಿದ ಹೇಳಿಕೆಯಂತೆ ದಯಾನಂದ ಭಂಡಾರಿ ಇವರಿಗೆ ಒಂದು ಇನ್ನೋವಾ ಕಾರ್ನ್ನು ಮತ್ತು ರೂ. ೫೦ ಲಕ್ಷಗಳನ್ನು ನೀಡಿರುವುದಾಗಿ ಒಪ್ಪಿಕೊಂಡಿರುತ್ತಾರೆ.
• ಮಾನ್ಯ ಇ.ಡಿ.ಯವರು ಈ ಇಬ್ಬರೂ ಅಧಿಕಾರಿಗಳ ಮನೆಗಳನ್ನು ಜಪ್ತ್ ಮಾಡಿದ ಸಂದರ್ಭದಲ್ಲಿ ಶ್ರೀಮತಿ ಎನ್. ವಾಣಿ ಇವರ ಮನೆಯಲ್ಲಿಯೇ ರೂ. ೧ ಕೋಟಿ ೫೦ ಲಕ್ಷ ನಗದು ಸಿಕ್ಕಿರುವುದಾಗಿ ಚಾರ್ಜಶೀಟ್ನಲ್ಲಿ ನಮೂದಿಸಿದ್ದಾರೆ.
• ಈ ಹಗರಣದ ಮುಖ್ಯ ರೂವಾರಿಗಳಾದ ಕೇಂದ್ರ ಕಚೇರಿಯಿಂದ ಶ್ರೀ ದಯಾನಂದ ಭಂಡಾರಿ, ಶ್ರೀಮತಿ ಎನ್. ವಾಣಿ, ಶ್ರೀ ಮಂಜುನಾಥ ಮುದಕವಿ ಹಾಗೂ ಶ್ರೀ ಎಲ್. ಶ್ರೀನಿವಾಸ ಹಾಗೂ ಇನ್ನೂ ಹಲವಾರು ಸಿಬ್ಬಂದಿಗಳು ಈ ಹಗರಣದಲ್ಲಿ ಭಾಗಿಯಾಗಿರುವುದನ್ನು ನಮ್ಮ ಸಂಘಟನೆಯಿಂದ ಸಾಕ್ಷಿ ಸಮೇತ ಈ ಹಿಂದೆ ಹಲವಾರು ಬಾರಿ ದೂರು ನೀಡುತ್ತಾ ಬಂದಿರುತ್ತೇವೆ. ಆದರೆ, ಸಂಬಂಧಿಸಿದ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ.
• ಅದು ಅಲ್ಲದೆ ಸದರಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ, (ಇ.ಡಿ.) ನವದೆಹಲಿ ರವರು ಈ ಅಧಿಕಾರಿಗಳನ್ನು ಹಲವಾರು ಬಾರಿ ವಿಚಾರಣೆಗೆ ಒಳಪಡಿಸಿ ಅಂತಿಮವಾಗಿ ಇವರುಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದು ಇರುವುದಾಗಿ ಖಚಿತಪಡಿಸಿದ ಹಿನ್ನಲೆಯಲ್ಲಿ ಆರೋಪಿಗಳನ್ನಾಗಿ ಮಾಡಿರುತ್ತಾರೆ. ಇದನ್ನು ಅವಲೋಕಿಸಿದ ನಂತರವಾದರೂ ಕೆಐಎಡಿಬಿಯ ಹಿರಿಯ ಅಧಿಕಾರಿಗಳು ತಪ್ಪಿಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿತ್ತು ಆದರೆ ಈವರೆಗೂ ಕೂಡಾ ತಪ್ಪಿತಸ್ಥರ ಮೇಲೆ ಯಾವುದೇ ಇಲಾಖೆ ತನಿಖೆ ಜರುಗಿಸದೇ ಕಠೀಣ ಕಾನೂನಿನಡಿ ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ.
• ಸನ್ ೨೦೧೦-೧೧ ರಲ್ಲಿ ಪರಿಹಾರ ಪಡೆದಂತಹ ಜಮೀನುಗಳಿಗೆ ಮತ್ತೇ ಅದೇ ಜಮೀನುಗಳಿಗೆ ಪುನಃ ಪೇಮೆಂಟನ್ನು ಸನ್ ೨೦೨೧-೨೨ ರಲ್ಲಿ ಮೇಲ್ಕಾಣಿಸಿದ ಅಧಿಕಾರಿಗಳು ಮಾಡಿದ್ದು ಸ್ಪಷ್ಟವಾಗಿರುತ್ತದೆ. ಸದರಿ ಅವಧಿಯಲ್ಲಿ ಧಾರವಾಡ ಕಚೇರಿಯಲ್ಲಿ ಕಾರ್ಯನಿರ್ವಹಿಸಿದಂತಹ ಸಿಬ್ಬಂದಿಗಳನ್ನು ಇನ್ನೂ ಅದೇ ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಟ್ಟಿದ್ದು ಇದರಿಂದ ಅವರು ತನಿಖೆಗೆ ಕಡತಗಳನ್ನು ನೀಡದೇ ಕಳೆದು ಹೋಗಿವೆ ಎಂಬ ಉತ್ತರವನ್ನು ನೀಡುತ್ತಿದ್ದಾರೆ.
• ನಮ್ಮ ಸಂಘಟನೆಯು ಪ್ರಾರಂಭದಿಂದ ರೂ.೮೪ ಕೋಟಿಗೂ ಅಧಿಕ ಹಗರಣ ಆಗಿರುವುದಾಗಿ ದೂರು ನೀಡುತ್ತಿದ್ದು, ಮಾನ್ಯ ಇ.ಡಿ. ರವರು ರೂ. ೭೨ ಕೋಟಿಗೂ ಅಧಿಕ ಹಗರಣ ಆಗಿರುವುದಾಗಿ ಅಂಕಿ-ಅಂಶಗಳನ್ನು ನೀಡಿದ್ದಾರೆ. ಕಾರಣ ಕಳೆದು ಹೋಗಿವೆ ಎಂದು ತನಿಖೆಗೆ ನೀಡದೇ ಇರುವಂತಹ ಪ್ರಕರಣಗಳ ಕಡತಗಳನ್ನು ಪತ್ತೆ ಹಚ್ಚಿದಲ್ಲಿ ಇನ್ನಷ್ಟು ಮೊತ್ತದ ಹಗರಣ ಬೆಳಕಿಗೆ ಬರುತ್ತದೆ. ಈ ಕಳೆದು ಹೋದ ಕಡತಗಳ ಬಗ್ಗೆ ಆ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಸಿಬ್ಬಂದಿಗಳನ್ನು ತನಿಖೆಗೆ ಒಳಪಡಿಸಿ ಆ ಕಡತಗಳನ್ನು ಯಾರು ಎಲ್ಲಿಗೆ ತೆಗೆದುಕೊಂಡು ಹೋದರು ಎಂಬುದರ ಬಗ್ಗೆ ಪತ್ತೆ ಮಾಡಲು ಪ್ರತ್ಯೇಕ ಎಫ್.ಐ.ಆರ್. ನ್ನು ದಾಖಲಿಸುವಂತೆ ಕೇಂದ್ರ ಕಚೇರಿಯಿಂದ ಕ್ರಮ ಕೈಗೊಳ್ಳಬೇಕಾಗಿದ್ದು ಅವರು ಈವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
• ಸಧ್ಯಕ್ಕೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಈ ಬಹುಕೋಟಿ ಹಗರಣದಲ್ಲಿ ಆರೋಪಿಗಳಾಗಿ ಜಾಮೀನಿನ ಮೇಲೆ ಹೊರಗಡೆ ಇರುವಂತಹ ಏಜೆಂಟರುಗಳೊಂದಿಗೆ ಪ್ರತಿದಿನ ಸಂಪರ್ಕದಲ್ಲಿದ್ದು ಈ ಆರೋಪಿಗಳನ್ನೇ ಕಚೇರಿಯಲ್ಲಿ ಕೂರಿಸಿಕೊಂಡು ಇನ್ನೂ ಕಚೇರಿಯಲ್ಲಿ ಇಂತಹದೇ ಹಗರಣವನ್ನು ಮಾಡಲು ಮುಂದಾಗಿದ್ದಾರೆ. ಇ.ಡಿ. ಪ್ರಕರಣದಲ್ಲಿನ ಪ್ರಮುಖ ಆರೋಪಿಯೊಬ್ಬರನ್ನು ಕಚೇರಿಯ ವ್ಯವಸ್ಥಾಪಕರೊಬ್ಬರು ತಮ್ಮ ಕ್ಯಾಬಿನಲ್ಲೇ ಕೂರಿಸಿಕೊಂಡು ಅಕ್ರಮ ಎಸಗುತ್ತಿರುವುದನ್ನು ಸಾಕ್ಷಿ ಸಮೇತ ನಾವು ಈ ಹಿಂದೆ ಮಾಧ್ಯಮಗಳ ಮುಖಾಂತರ ತೋರಿಸಿದಾಗ್ಯೂ ಕೂಡಾ ಕೆಐಎಡಿಬಿಯ ಹಿರಿಯ ಅಧಿಕಾರಿಗಳು ಇಂತಹವರ ಮೇಲೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
• ಕಚೇರಿಯಲ್ಲಿಯೇ ಕುಳಿತು ಮತ್ತೆ ಅವ್ಯವಹಾರ ಮಾಡುತ್ತಿರುವುದನ್ನು ಮಾಧ್ಯಮಗಳ ಮುಖಾಂತರ ಬಯಲಿಗೆಳೆದ ನಂತರ ಕಚೇರಿಯ ಸಿಬ್ಬಂದಿಗಳು ಆರೋಪಿಗಳೊಂದಿಗೆ ನೇರ ಸಂಪರ್ಕವನ್ನು ಇಟ್ಟುಕೊಂಡು ಕಚೇರಿ ಬಿಟ್ಟ ನಂತರ ಹೊರಗಡೆ ಹೊಟೇಲುಗಳಲ್ಲಿ ಅವ್ಯವಹಾರ ಮಾಡುತ್ತಿದ್ದು ದೃಢಪಟ್ಟಿದೆ. ಇಂತಹ ಸಿಬ್ಬಂದಿಗಳನ್ನು ಕೂಡಲೇ ಕೆಲಸದಿಂದ ತೆಗೆದುಹಾಕಲು ಕ್ರಮ ಜರುಗಿಸಬೇಕಾಗಿದೆ.
• ಸನ್ ೨೦೧೦-೧೧ ರಲ್ಲಿ ಪರಿಹಾರ ಪಡೆದಂತಹ ಕೆಲವು ಭೂಮಾಲೀಕರು ಅವರೇ ಮತ್ತೊಮ್ಮೆ ೨೦೨೨ ರಲ್ಲಿ ಎರಡನೇ ಬಾರಿ ಅದೇ ಜಮೀನಿಗೆ ಖೊಟ್ಟಿ ದಾಖಲಾತಿ ನೀಡಿ ಪರಿಹಾರ ಪಡೆದಿದ್ದು ತನಿಖೆಯಿಂದ ಸಾಭಿತಾಗಿದೆ. ಇಂತಹ ಭೂಮಾಲೀಕರನ್ನು ಗೊತ್ತು ಮಾಡಿ ಇವರಿಂದ ಹಣ ವಸೂಲ ಮಾಡಲು ಮತ್ತು ರಿಕವರಿ ಸ್ಯೂಟ್ ದಾಖಲಿಸುವಲ್ಲಿ ಸಂಬಂಧಪಟ್ಟ ವಿಶೇಷ ಭೂಸ್ವಾಧೀನಾಧಿಕಾರಿಗಳು ಮತ್ತು ಕಾನೂನು ಸಲಹೆಗಾರರು ಹಾಗೂ ಇತರೆ ಸಿಬ್ಬಂದಿಗಳು ಈವರೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಪರೋಕ್ಷವಾಗಿ ಇವರೂ ಸಹ ಈ ಹಗರಣದಲ್ಲಿ ಭಾಗಿಯಾಗಿದ್ದಾರೆಂಬ ಸಂಶಯವಾಗುತ್ತಿದೆ.
• ಈ ಹಗರಣದಲ್ಲಿನ ಹಣದಿಂದಲೇ ಏಜೆಂಟರುಗಳು ಮತ್ತು ಸಿಬ್ಬಂದಿಗಳು ಸೇರಿಕೊಂಡು ಹೊಸವಾಳ, ಹೆಗ್ಗೇರಿ, ರಾಮಾಪೂರ ಇತರೆ ಗ್ರಾಮಗಳಲ್ಲಿ ಕೆಲವೊಂದು ಭೂಸ್ವಾಧೀನಕ್ಕೆ ಒಳಪಟ್ಟ ಜಮೀನುಗಳನ್ನೇ ತೆಗೆದುಕೊಂಡಿದ್ದು ಈ ಜಮೀನುಗಳ ಪರಿಹಾರವನ್ನು ಸಧ್ಯ ಕಾರ್ಯನಿರ್ವಹಿಸುವಂತಹ ಸಿಬ್ಬಂದಿಗಳ ಸಹಕಾರದಿಂದ ಈ ಏಜೆಂಟರು ಪರಿಹಾರವನ್ನು ತೆಗೆದುಕೊಳ್ಳಲು ಕಚೇರಿಯಿಂದ ಹೊರಗಡೆ ವವ್ಯಹಾರವನ್ನು ಕುದುರಿಸುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಈ ಹಗರಣದ ಹಣವನ್ನು ಬಡ್ಡಿ ಸಮೇತ ಮರಳಿ ಜಮಾ ಮಾಡಿಕೊಳ್ಳಲು ಮಂಡಳಿಗೆ ಸಾಕಷ್ಟು ಅವಕಾಶಗಳಿದ್ದು ಈ ಬಗ್ಗೆ ಧಾರವಾಡ ಕಚೇರಿ ಮತ್ತು ಕೇಂದ್ರ ಕಚೇರಿಯ ಸಂಬಂಧಪಟ್ಟ ಈಗಿನ ಅಧಿಕಾರಿಗಳು ಯಾರೋಬ್ಬರೂ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ.
• ಹಗರಣದಲ್ಲಿ ಆರೋಪಿತರಾಗಿರುವ ಶ್ರೀಮತಿ ಎನ್.ವಾಣಿ ಇವರ ಮನೆಯ ಮೇಲೆ ಇ.ಡಿ. ದಾಳಿಯಾದ ೧ ಕೋಟಿ ೫೦ ಲಕ್ಷ ನಗದು ಪತ್ತೆ ಮತ್ತು ಶ್ರೀ ದಯಾನಂದ ಬಂಡಾರಿ ಮಧ್ಯವರ್ತಿಗಳು ಮತ್ತು ಸಿಬ್ಬಂದಿಗಳು ನೀಡಿದ ಹೇಳಿಕೆಯಂತೆ ರೂ. ೫೦ ಲಕ್ಷ ನಗದು ಮತ್ತು ಒಂದು ಇನ್ನೋವಾ ಕಾರು ನೀಡಿರುವ ಬಗ್ಗೆ ಇ.ಡಿ. ರವರು ತನ್ನ ದೋಷಾರೋಪಣ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
• ಇಡೀ ಅವ್ಯವಹಾರದ ಪ್ರಕರಣಕ್ಕೆ ಸಂಬಂಧಿಸಿದ ರಾಜ್ಯದ ಸಚಿವರಾದ ಶ್ರೀ ಎಮ್. ಬಿ. ಪಾಟೀಲ ರವರು ರೂಪಾಯಿ ೧೯.೫೦ ಕೋಟಿಯಷ್ಟು ಮಾತ್ರ ಅವ್ಯವಹಾರ ಆಗಿದೆ ಎಂದು ಸದನದಲ್ಲಿಯೇ ಸ್ಪಷ್ಟಪಡಿಸಿದ್ದಾರೆ. ಆದರೆ ಹಗರಣದ ಮೊತ್ತ ದೊಡ್ಡ ಪ್ರಮಾಣದಲ್ಲಿ ಆಗಿದ್ದರೂ ಸರಕಾರ ಇದುವರೆಗೂ ತಪ್ಪಿತಸ್ಥ ಮಧ್ಯವರ್ತಿಗಳಾಗಲಿ ಅಥವಾ ಕೆ.ಐ.ಎ.ಡಿ.ಬಿ. ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಇದುವರೆಗೂ ಯಾವುದೇ ಕ್ರಮ ಜರುಗಿಸಲು ಮುಂದಾಗಿಲ್ಲ. ಇದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
• ಆದ್ದರಿಂದ ಸರಕಾರ ಅವ್ಯವಹಾರದ ಒಟ್ಟು ರಕಂನ್ನು ಮರಳಿ ಮಂಡಳಿಗೆ ಪಡೆಯಬೇಕು. ಅಲ್ಲಿಯ ತನಕ ಸಂಬಂಧಸಿದ ತಪ್ಪಿತಸ್ಥರ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಯಾವುದೇ ವಹಿವಾಟು ನಡೆಯದಂತೆ ನಿಗಾವಹಿಸಬೇಕು ಎಂದು ಜನಜಾಗೃತಿ ಸಂಘ ಒತ್ತಾಯಿಸುತ್ತದೆ.
