ಧಾರವಾಡ: ಅರ್ಧ ಕ್ವಿಂಟಾಲ್ “ಗಾಂಜಾ ವಶ”- 15 ದಿನದಲ್ಲಿ ಮತ್ತೊಂದು ‘ದೊಡ್ಡ ರೇಡ್’ ಮಾಡಿದ CPI ಶಿವಯೋಗಿ ಲೋಹಾರ ಟೀಂ…
ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸರಿಗೂ ಬಹುಮಾನ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ
ಧಾರವಾಡ: ಮೂವತೈದು ಲಕ್ಷ ರೂಪಾಯಿ ಮೌಲ್ಯದ ಸ್ಪಿರಿಟ್ ವಶಕ್ಕೆ ಪಡೆದಿದ್ದ ಗರಗ ಠಾಣೆಯ ಸಿಪಿಐ ಶಿವಯೋಗಿ ಲೋಹಾರ ಪಡೆ, ಅದೇ ಪ್ರಕರಣದಲ್ಲಿ ಬೆನ್ನತ್ತಿ ಇಬ್ಬರು ಆರೋಪಿಗಳ ಸಮೇತ ಬರೋಬ್ಬರಿ ಅರ್ಧ ಕ್ವಿಂಟಾಲ್ ಗಾಂಜಾ ವಶಕ್ಕೆ ಪಡೆದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಮೆಚ್ಚುಗೆ ಗಳಿಸಿದ್ದಾರೆ.
ಎಸ್ಪಿ ಗುಂಜನ ಆರ್ಯ ಮಾತನಾಡಿದ್ದು…
ಬೆಂಗಳೂರು ಮೂಲದ ರಮೇಶ್ ಮತ್ತು ಜಾಯ್ ಎಂಬಿಬ್ಬರು ಆರೋಪಿಗಳು ರೂಂವೊಂದರಲ್ಲಿ 13 ಲಕ್ಷ ಮೌಲ್ಯದ 51 ಕೆಜಿ ಗಾಂಜಾ ಮರೆಮಾಚಿದ್ದರು. ಅಲ್ಲಿ ದಾಳಿ ಮಾಡಿದಾಗ ರಮೇಶ್ ಮತ್ತು ಜಾನ್ ಸಮೇತ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಸ್ಪಿರಿಟ್ ಆರೋಪಿಗಳಾದ ಸಜಿವ್ ಮತ್ತು ಜಾಯ ವಿಚಾರಣೆಯಲ್ಲಿ ಗಾಂಜಾ ಸಂಗ್ರಹಿಸಿಟ್ಟ ಮಾಹಿತಿ ಬಾಯ್ಬಿಟ್ಟಿದ್ದರು. ಸದ್ಯ 15 ದಿನದಲ್ಲಿ 35 ಲಕ್ಷ ಮೌಲ್ಯದ ಸ್ಪೀರಿಟ್ 13 ಲಕ್ಷ ಮೌಲ್ಯದ ಗಾಂಜಾ ಸೇರಿ 4ರನ್ನ ಗರಗ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಗರಗ ಠಾಣೆ ಪಿಎಸ್ಐ ಎಸ್.ಪಿ.ಉನ್ನದ, ಅಳ್ನಾವರ ಪಿಎಸ್ಐ ಬಸವರಾಜ ಯದ್ದಲಗುಡ್ಡ, ಸಿಬ್ಬಂದಿಗಳಾದ ಯು.ಆರ್.ಸಂಪಗಾಂವಿ, ವಿಜಯ ಉಪ್ಪಿನ, ಆರ್.ಕೆ.ಕೊಪ್ಪದ, ಪಿ.ಎಸ್.ಟಕ್ಕಳಕಿ, ಪ್ರಸಾದ ಬಡಿಗೇರ, ಸೋಮು ರಾಠೋಡ, ಸಿಡಿಆರ್ ವಿಭಾಗದ ವಿಠ್ಠಲ ಡಂಗನವರ, ರವೀಂದ್ರ ಪಟ್ಟೇದ ಭಾಗವಹಿಸಿದ್ದರು.
