ಧಾರವಾಡ: ಬಸ್‌ಲ್ಲಿ “ಹಾರ್ಟ್ ಅಟ್ಯಾಕ್”- ಸಿವಿಲ್ ಆಸ್ಪತ್ರೆಗೆ ಬಸ್ಸನ್ನೇ ತಂದು ಪ್ರಾಣ ಉಳಿಸಿದ ಚಾಲಕ…
ಧಾರವಾಡ: ಬಸ್‌ಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರಿಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ಬಸ್‌ನ್ನ ಧಾರವಾಡ ಸಿವಿಲ್ ಆಸ್ಪತ್ರೆಗೆ ತಂದು ಮಹಿಳೆಯ ಪ್ರಾಣ ಉಳಿಸಿದ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆಯ ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ…
ಬೇಂದ್ರೆ ನಗರ ಸಾರಿಗೆ ಬಸ್‌ನಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದಾಗ ಹೃದಯಾಘಾತವಾಗಿದೆ. ತಕ್ಷಣವೇ ಜಾಗೃತರಾದ ಚಾಲಕ ಶಂಕರ ಪಾಟೀಲ, ನಿರ್ವಾಹಕ ಮಂಜು ಸಂಗೊಳ್ಳಿ ಬಸ್‌ನ್ನ ಸಹಪ್ರಯಾಣಿಕರ ಜೊತೆ ಆಸ್ಪತ್ರೆಗೆ ಬಂದಿದ್ದಾರೆ.
ಸರಿಯಾದ ಸಮಯದಲ್ಲಿ ಬಸ್ ಆಸ್ಪತ್ರೆಗೆ ಬಂದ ಪರಿಣಾಮ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಚಾಲಕ- ನಿರ್ವಾಹಕನ ಕಾರ್ಯಕ್ಕೆ ಜನರು ಮೆಚ್ಚುಗೆವ್ಯಕ್ತಪಡಿಸಿದ್ದಾರೆ.
