ಎದುರಿಗೆ ಬಂದ ಪೊಲೀಸರಿಗೆ “ಲಾಂಗ್-ಬಡಿಗೆ” ತೋರಿಸಿ ಪರಾರಿಯಾದ ದರೋಡೆಕೋರರು… Exclusive Video
ದರೋಡೆಗೆ ಸಂಚು ಹಾಕಿದ್ದ ನಾಲ್ವರು
ಪಕ್ಕದ ಮನೆಯವರಿಂದ ವೀಡಿಯೋ ಚಿತ್ರೀಕರಣ
ಚಿಕ್ಕೋಡಿ: ಮನೆಗೆ ನುಗ್ಗಿ ಲೂಟಿ ಮಾಡಲು ಹೊಂಚು ಹಾಕಿದ್ದ ದರೋಡೆಕೋರರ ತಂಡವೊಂದು ಪೊಲೀಸರು ಬಂದ ತಕ್ಷಣ ಲಾಂಗ್ ಮತ್ತು ಬಡಿಗೆ ತೋರಿಸಿ ಪರಾರಿಯಾದ ಘಟನೆ ನಿಪ್ಪಾಣಿಯಲ್ಲಿ ನಡೆದಿದೆ.
ಎಕ್ಸಕ್ಲೂಸಿವ್ ವೀಡಿಯೋ…
ದರೋಡೆಗೆ ಯತ್ನ ನಡೆಸುತ್ತಿದ್ದ ಸಮಯದಲ್ಲಿ ಪೊಲೀಸರು ಸರಿಯಾದ ವೇಳೆ ಎಂಟ್ರಿಯಾಗಿದ್ದಾರೆ. ಈ ಸಮಯದಲ್ಲಿ ಪೊಲೀಸರ ಮೇಲೆ ಲಾಂಗ್ ಮತ್ತೆ ಬಡಗಿಯಿಂದ ಹಲ್ಲೆಗೆ ಯತ್ನಿಸಿ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ.
ಕಳೆದ ರಾತ್ರಿ 1:30 ರಿಂದ 2:30ರ ಸಮಯದಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಮಾನೆ ಪ್ಲಾಟನಲ್ಲಿ ಸಂಭವಿಸಿದ್ದು, ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆದಿದೆ.
