ಧಾರವಾಡ ಜಿಲ್ಲೆಯ “ದಢೂತಿ” ಪತ್ರಕರ್ತನಿಗೆ “ಕಾಂಗ್ರೆಸ್” ಆಫೀಸಿನಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಮಾನವಂತರು…!!!
ಧಾರವಾಡ: ಬೇರೆಯವರ ಹೆಸರು ಬಳಕೆ ಮಾಡಿಕೊಂಡು ಹಣಕ್ಕೆ ಬೇಡಿಕೆಯಿಟ್ಡ ಪ್ರಕರಣದಲ್ಲಿ ಜಿಲ್ಲೆಯ ದಢೂತಿ ಪತ್ರಕರ್ತನೋರ್ವನಿಗೆ ಕಾಂಗ್ರೆಸ್ ಕಚೇರಿಯಲ್ಲಿ ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣವೊಂದರ ಸಂಬಂಧವಾಗಿ ಮೊಬೈಲ್‌ನಲ್ಲಿ ಮಾತನಾಡಿರುವ ದಢೂತಿ ಪತ್ರಕರ್ತ, ಬೇರೆ ಪತ್ರಿಕೆಯವರ ಹೆಸರಿನಲ್ಲಿ ವಸೂಲಿಗೆ ಇಳಿದಿದ್ದು ಪತ್ತೆಯಾಗಿದೆ. ಇದನ್ನರಿತ ಮಾನವಂತ ಪತ್ರಕರ್ತ ಕಾಂಗ್ರೆಸ್ ಕಚೇರಿಯಲ್ಲಿ “ಮೊಬೈಲ್ ಸಾಕ್ಷಿ ತೋರಿಸಿ” ಮಖಾ ಮಖಾ ಹೊಡೆದಿದ್ದಾರೆ.

ಈ ವಿಷಯ ಆ ಪ್ರದೇಶದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ದಢೂತಿ ಪತ್ರಕರ್ತ ಹೊಡೆತ ತಿಂದರೂ ಏನೂ ಮಾಡದೇ ಸುಮ್ಮನೆ ಕೂತಿರುವುದು ಅನುಮಾನಕ್ಕೆ ಎಡೆಮಾಡಿದೆ.
ಈ ಪ್ರಕರಣ ಪೊಲೀಸ್ ಠಾಣೆವರೆಗೂ ಹೋಗಿಲ್ಲ ಎಂಬ ನಿಖರ ಮಾಹಿತಿ ಲಭಿಸಿದೆ.
