ಧಾರವಾಡ: ಸ್ಮಶಾನದ ಹೋರಾಟಕ್ಕೆ ಜಯ. ಸಂದಾನದ ವೇಳೆಯಲ್ಲಿ “ಚಿಂಚೋರೆ-ಅಷ್ಟಗಿ” ಉಪಸ್ಥಿತಿ…!!!
ಸ್ಮಶಾನ ಭೂಮಿಗೆ 1 ಎಕರೆ 15 ಗುಂಟೆ ಜಮೀನು ಬಿಟ್ಟುಕೊಟ್ಟ ರಪಾಟಿ ಕುಟುಂಬ
ಧಾರವಾಡ: ಸ್ಮಶಾನ ಭೂಮಿ ಜಾಗವನ್ನು ಲೇಔಟ್ ಮಾಡಿ ಮಾರಾಟ ಮಾಡಲು ಮಾಲೀಕರು ಮುಂದಾಗಿದ್ದಾರೆ ಎಂದು ಧಾರವಾಡ ಕಮಲಾಪುರ, ಮಾಳಾಪುರ, ಮರಾಠಾ ಕಾಲೊನಿ, ಪತ್ರೇಶ್ವರ ನಗರ, ನಾರಾಯಣಪುರ, ಹರಿಜಕೇರಿ ಸೇರಿದಂತೆ ವಿವಿಧ ಕಡೆಗಳ ಜನರು ನಡೆಸಿದ ಹೋರಾಟಕ್ಕೆ ಮಣಿದ ರಪಾಟಿ (ಹಿರೇಮಠ) ಕುಟುಂಬ 1 ಎಕರೆ 15 ಗುಂಟೆ ಜಮೀನು ಸ್ಮಶಾನ ಭೂಮಿಗಾಗಿ ಬಿಟ್ಟುಕೊಡಲು ತಿರ್ಮಾನ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಜನರು ರಪಾಟಿ ಹಿರೇಮಠ ಕುಟುಂಬ ಸದಸ್ಯರನ್ನು ಹಾಗೂ ತಹಸಿಲ್ದಾರ್ ಡಿ.ಎಚ್ ಹೂಗಾರ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕಮಲಾಪುರ, ಮಾಳಾಪುರದ ರಪಾಟಿ ಮಠದ 6 ನೇ ತಲೆಮಾರಿನ ಗುರುಗಳಾದ ಮಲ್ಲಿಕಾರ್ಜುನಯ್ಯ ರಪಾಟಿ ಧಾರವಾಡ ತಹಶೀಲ್ದಾರ್ ಡಿ.ಎಚ್ ಹೂಗಾರ ಸಮ್ಮುಖದಲ್ಲೇ ಈ ನಿರ್ಧಾರ ಪ್ರಕಟಿಸಿದ್ದಾರೆ. ಇನ್ನೂ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲು ಅಗತ್ಯ ಸಹಕಾರ ನೀಡುವುದಾಗಿ ಘೋಷಿಸಿದ್ದಾರೆ. ಇನ್ನೂ ರಪಾಟಿ (ಹಿರೇಮಠ) ಖಾಸಗಿ ವ್ಯಕ್ತಿಗಳಿಗೆ ಧಾರವಾಡ ಯಾದವಾಡ ರಸ್ತೆಗೆ ಹೊಂದಿಕೊಂಡಿರುವ ಸ್ಮಶಾನ ಭೂಮಿ ಜಾಗವನ್ನು ಪರಭಾರೆ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿದ ಜನರು ಅದೇ ಜಾಗದಲ್ಲಿ ನೋಟೀಸ್ ಬೋರ್ಡ್ ಅಳವಡಿಸಿ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದೀಗ ಜನರ ಹೋರಾಟಕ್ಕೆ ಮಣಿದ ಮಠದ ಗುರುಗಳಾದ ಮಲ್ಲಿಕಾರ್ಜುನಯ್ಯ ಹಿರೇಮಠ (ರಪಾಟಿ) 1 ಎಕರೆ 15 ಗುಂಟೆ ಜಮೀನು ಸ್ಮಶಾನಕ್ಕೆ ಬಿಟ್ಟು ಕೊಡಲು ಸಿದ್ಧ ಎಂದು ಹೇಳಿದ್ದಾರೆ.
