ಧಾರವಾಡ: ನಿವೃತ್ತ ACP ಪುತ್ರನ ಕಾಲು ಛಿದ್ರ ಮಾಡಿದವನನ್ನ ಚೇಸಿಂಗ್ ಮಾಡಿ ವಶಕ್ಕೆ ಪಡೆದದ್ದು ಯಾರು ಗೊತ್ತಾ…!?
ಧಾರವಾಡ: ವಿದ್ಯಾಗಿರಿಯ ಜೆಎಸ್ಎಸ್ ಕಾಲೇಜ್ ಬಳಿಯಲ್ಲಿ ನಡೆದ ಹಿಟ್ ಆ್ಯಂಡ್ ಪ್ರಕರಣದಲ್ಲಿ ಕಾರನ್ನ ಬೆನ್ನತ್ತಿ ಹಿಡಿದಿದ್ದು ಧಾರವಾಡ ಸಂಚಾರಿ ಠಾಣೆಯ ಹೆಡ್ಕಾನ್ಸಟೇಬಲ್ ಮಂಜುನಾಥ ಗದ್ದಿಕೇರಿ ಎಂಬ ಮಾಹಿತಿ ಲಭಿಸಿದೆ.
ಬೈಕಿನಲ್ಲಿ ಹೋಗುತ್ತಿದ್ದ ನಿವೃತ್ತ ಎಸಿಪಿ ಗೋವಿಂದಪ್ಪ ಕಿತ್ತಲಿ ಅವರ ಪುತ್ರ ಉದಯ ಕರ್ನಾಟಕ ಬ್ಯಾಂಕ್ ಉದ್ಯೋಗಿಯಾಗಿದ್ದು, ಕಾರಲ್ಲಿದ್ದವ ಬೆಳಗಾವಿ ಮೂಲದ ಎಂಬಿಎ ವಿದ್ಯಾರ್ಥಿ ಶ್ರೀಶೈಲ ಹಳ್ಳೂರ ಎಂದು ಗೊತ್ತಾಗಿದೆ.
ಜೆಎಸ್ಎಸ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಐ ಕುಲಕರ್ಣಿ, ಹೊಸಮನಿ ಹಾಗೂ ಮಂಜುನಾಥ ಗದ್ದಿಕೇರಿ ಅವರು ಘಟನೆ ನಡೆದ ಸ್ಥಳ ತಲುಪಿದ್ದಾರೆ. ತಕ್ಷಣವೇ ಜಾಗೃತರಾದ ಹೆಡ್ಕಾನ್ಸಟೇಬಲ್ ಮಂಜುನಾಥ ಗದ್ದಿಕೇರಿ ಅವರು, ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಆರೋಪಿಯನ್ನ ಕಾರು ಸಮೇತ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಜುನಾಥ ಗದ್ದಿಕೇರಿ ಅವರ ಸಮಯಪ್ರಜ್ಞೆಯಿಂದ ಆರೋಪಿ ಸಿಕ್ಕಿಬಿದ್ದಿದ್ದು, ಕಿತ್ತಲಿ ಅವರ ಪುತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
