ಧಾರವಾಡ: 11 ಬೈಕ್ ಕದ್ದ 23 ವರ್ಷದ ಆರೋಪಿಯನ್ನ ಹೆಡಮುರಿ ಕಟ್ಟಿದ ಉಪನಗರ ಠಾಣೆ ಪೊಲೀಸರು…!!!
ಧಾರವಾಡ: ಸವದತ್ತಿಯೂ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಾಲಾಕಿತನದಿಂದ ದ್ವಿಚಕ್ರ ವಾಹನ ಕದಿಯುತ್ರಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಧಾರವಾಡ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನ ಬೆಳಗಾವಿ ಜಿಲ್ಲೆಯ ಯಮನಾಪುರ ಗ್ರಾಮದ 23 ವರ್ಷದ ಸುಹಾಸ ದೇಸಾಯಿ ಎಂದು ಗುರುತಿಸಲಾಗಿದ್ದು, ಆತನಿಂದ 5.90ಲಕ್ಷ ರೂಪಾಯಿ ಮೌಲ್ಯದ 11 ಬೈಕ್‌ಗಳನ್ನ ವಶಕ್ಕೆ ಪಡೆಯಲಾಗಿದೆ.
ವೀಡಿಯೋ…
ಇನ್ಸಪೆಕ್ಟರ್ ಪ್ರಭು ಗಂಗೇನಹಳ್ಳಿ ನೇತೃತ್ವದಲ್ಲಿ ಪಿಎಸ್‌ಐ ಎಂ.ವೈ. ಕುರ್ತಕೋಟಿ, ಎಎಸ್‌ಐ ಸಿ.ಡಿ. ಬಳ್ಳಾರಿ, ಎಎಸ್‌ಐ ಸಿ.ಎನ್.ಸವದತ್ತಿ ಸಿಬ್ಬಂದಿ ಜನರಾದ ನಾರಾಯಣ ಜಾಧವ್, ಎಂ.ಕೆ. ಲಮಾಣಿ, ದಯಾನಂದ ಗುಂಡಗೈ, ಮುಸ್ತಫಾ ಬೀಳಗಿ, ಶ್ರೀಕಾಂತ ಹತ್ತಿಮತ್ತೂರ, ಹೆಚ್ ವೈ ಜಟ್ಟೆನ್ನವರ್, ಮಂಜುನಾಥ ಬೆಳ್ಳಿಗಟ್ಟಿ, ಆದೃಶ ಕಲಭಾವಿ, ರವಿ ಗೋಮಪ್ಪನವರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
