ಉಳವಿಗೆ ಪಾದಯಾತ್ರೆ ಆರಂಭಿಸಿದ “ಧಣಿ”- ಮಾಜಿ ಶಾಸಕ ಅಮೃತ ದೇಸಾಯಿಯವರಿಗೆ ಸಾಥ್ ನೀಡಿದ ಸಾವಿರಾರೂ ಜನ…!!!
ಧಾರವಾಡ: ಉತ್ತರಕನ್ನಡ ಜಿಲ್ಲೆಯ ಉಳವಿ ಧಾರ್ಮಿಕ ಸ್ಥಳಕ್ಕೆ ಧಾರವಾಡ-71ಕ್ಷೇತ್ರದ ಮಾಜಿ ಶಾಸಕ ಅಮೃತ ದೇಸಾಯಿ ದಂಪತಿ ಇಂದಿನಿಂದ ಪಾದಯಾತ್ರೆ ಆರಂಭಿಸಿದ್ದು, ಸಾವಿರಾರೂ ಜನ ಇವರಿಗೆ ಸಾಥ್ ನೀಡಿದ್ದಾರೆ.
ಹುಟ್ಟೂರು ಹಂಗರಕಿಯಿಂದ ಗರಗದ ಪ್ರಸಿದ್ಧ ಶ್ರೀ ಮಡಿವಾಳೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ದೇಸಾಯಿ ದಂಪತಿಗಳು, ಧಾರವಾಡದ ಮುರುಘಾಮಠದ ಶ್ರೀ, ಹರಿಹರದ ವಚನಾನಂದ ಶ್ರೀಗಳು ಸೇರಿದಂತೆ ಹಲವು ಸ್ವಾಮೀಜಿಗಳಿಗೆ ಪಾದಪೂಜೆ ಸಲ್ಲಿಸಿದರು.
ತದನಂತರ ಆರಂಭಗೊಂಡ ಪಾದಯಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಮಾಜಿ ಶಾಸಕಿ ಸೀಮಾ ಮಸೂತಿ ಸೇರಿದಂತೆ ಹಲವು ಪ್ರಮುಖರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
