“ರಶೀದ್ ಮುತ್ಯಾ” ಜನರನ್ನ ವಂಚಿಸ್ತಿದ್ದಾನೆ. ಢೋಂಗಿಯನ್ನ ಬಂಧಿಸಿ ಎಂದ ಶ್ರೀ ಸಿದ್ಧಲಿಂಗ ಸ್ವಾಮೀಜಿ…!!!
ಕಲಬುರಗಿ: ಶಿವಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸುದ್ದಿಗೋಷ್ಟಿಯನ್ನ ನಡೆಸಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ರಶೀದ್ ನಾರಾಯಣ ಪುರ ಮುತ್ಯಾ ಕಳೆದ ಹಲವು ವರ್ಷಗಳಿಂದ ದರ್ಗಾ ನಿರ್ಮಾಣ ಮಾಡಿಕೊಂಡು, ಜನರನ್ನ ವಂಚಿಸುತ್ತಿರುವುದು ಬಯಲಾಗಿದೆ ಎಂದು ಹೇಳಿದರು.
ಅಮವಾಸ್ಯೆ , ಹುಣ್ಣಿಮೆಯಂದು ಬರುವ ಜನರಿಗೆ ಮೌಢ್ಯವನ್ನ ಬಿತ್ತುವ ಕೆಲಸ ಮಾಡ್ತಿದ್ದಾರೆ. ಸಂತಾನ ಭಾಗ್ಯ ಕರುಣಿಸ್ತೆನೆ ಅಂತಾ ಔಷಧಿ ಕೊಟ್ಟು ಹಣ ವಸೂಲಿ ಮಾಡ್ತಿದ್ದಾರೆ. ಅಲ್ಲಿ ಬಂದವರಿಂದಲೆ ಇವರೆ ಹೇಳಿ ಕೊಟ್ಟು ಮಾತನಾಡಿಸುತ್ತಿದ್ದಾರೆಂದರು.
20 ವರ್ಷದಿಂದ ಮಕ್ಕಳಾದವರಿಗೆ ಮಕ್ಕಳಾಗಿವೆಯಂತೆ. ಮಾತು ಬಾರದ ಬಾಲಕಿಗೆ ಮಾತು ಬಂದಿದೆಯಂತೆ ಈ ರೀತಿಯಾಗಿ ಹೇಳ್ತಿದ್ದಾರೆ. ಸ್ವಯಂ ಘೋಷಿತ ಸ್ವಾಮೀಜಿ ಅಂತಾ ಕರೆಯುವ ಸಚಿವ ಪ್ರಿಯಾಂಕ್ ಖರ್ಗೆ ಈ ನಕಲಿ ಮುತ್ಯಾ ಬಗ್ಗೆ ಗಮನಕ್ಕೆ ಬಂದಿಲ್ವಾ. ಅಥವಾ ರಶೀದ್ ಮುತ್ಯಾ ಮುಸ್ಲಿಂ ಎನ್ನುವ ಕಾರಣಕ್ಕೆ ಸುಮ್ಮನಿದ್ದಾರಾ ಸಚಿವರು ಎಂದು ಪ್ರಶ್ನಿಸಿದರು.
ಜಿಲ್ಲೆಯ ಎಲ್ಲ ಆಸ್ಪತ್ರೆ ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲೆ ಒಂದು ಹಾಲ್‌ನಲ್ಲಿ ಇವರಿಗೆ ಅವಕಾಶ ಮಾಡಿಕೋಡಿ. ರಶೀದ್ ಮುತ್ಯಾ ವಿರುದ್ಧ ದೂರು ಕೊಟ್ಟರೆ ಪೊಲೀಸರು ಯಾವ ಕ್ರಮ ಕೈಗೊಂಡಿಲ್ಲಾ. ರಶೀದ್ ಮುತ್ಯಾ ಕಾರು ಚಾಲಕನಿಗೆ ಯಾರೋ ಹಲ್ಲೆ ಮಾಡಿದ್ದಾರೆ. ಆದ್ರೆ ಮಣಿಕಂಠ ರಾಠೋಡ್ , ರಾಷ್ಟ್ರ ರಕ್ಷಣಾ ಪಡೆಯ ಜಿಲ್ಲಾಧ್ಯಕ್ಷ ಮಡಿವಾಳಪ್ಪ ಅವರನ್ನ ಬಂಧಿಸಿ ಜೈಲುಗೆ ಅಟ್ಟಿದ್ದಾರೆ. ರಶೀಧ ಹಠಾವೋ ನಾರಾಯಣಪುರ ಬಚಾವೋ ಆಂದೋಲನ ಶುರು ಮಾಡಬೇಕಾಗುತ್ತೆ ಎಂದು ಸ್ವಾಮೀಜಿ ಎಚ್ಚರಿಸಿದ್ದಾರೆ.
