MLC ಪಶ್ಚಿಮ ಪದವೀಧರ ಕ್ಷೇತ್ರ- ಹಿಂದು ಫೈರ್ ಬ್ರ್ಯಾಂಡ್ ಜಯತೀರ್ಥ ಕಟ್ಟಿ ಅವರಿಗೆ “ಟಿಕೆಟ್ ಫಿಕ್ಸ್”…!!!?
ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಕಟ್ಟಾಳು ಹಾಗೂ ಹಿಂದು ಫೈರ್ ಬ್ರ್ಯಾಂಡ್ ಎಂದು ಗುರುತಿಸಲ್ಪಡುವ ಜಯತೀರ್ಥ ಕಟ್ಟಿ ಅವರಿಗೆ ಪಶ್ಚಿಮ ಪದವೀಧರರ ಕ್ಷೇತ್ರದ ಬಿಜೆಪಿ ಟಿಕೆಟ್ ದೊರೆಯುವುದು ಬಹುತೇಕ ಖಚಿತವಾದಂತಿದೆ.
ಜಯತೀರ್ಥ ಕಟ್ಟಿ ಅವರು ಸಂಘಟನೆಯಲ್ಲಿ ಮುಂದಾಳತ್ವ ವಹಿಸಿಕೊಂಡು ಪಕ್ಷವನ್ನ ತಳಮಟ್ಟದಲ್ಲಿ ಗಟ್ಟಿಯಾಗಿಸುವಲ್ಲಿ ನಿರಂತರವಾಗಿ ಶ್ರಮವಹಿಸಿದ್ದನ್ನ ಪಕ್ಷದ ಮುಖಂಡರು ಗುರುತಿಸಿ ಈ ಬಾರಿ ಟಿಕೆಟ್ ನೀಡಲಿದ್ದಾರೆಂದು ಹೇಳಲಾಗಿದೆ.

ಜಯತೀರ್ಥ ಕಟ್ಟಿಯವರು ವಿಧಾನ ಪರಿಷತ್ ಚುನಾವಣೆಯ ಪೂರ್ವ ತಯಾರಿಯಲ್ಲಿ ತೊಡಗಿದ್ದು, ಇದಕ್ಕೆ ಬಹುತೇಕರ ಸಹಮತವಿದೆ ಎಂಬುದು ಪಕ್ಷದಲ್ಲಿ ರಹಸ್ಯವಾಗಿ ಉಳಿದಿಲ್ಲ.
ಜಯತೀರ್ಥ ಕಟ್ಟಿಯವರಿಗೆ ಟಿಕೆಟ್ ನೀಡಿದರೇ ಗೆಲುವು ನಿಶ್ಚಿತ ಎಂಬುದನ್ನ ಪಕ್ಷದ ಅನೇಕರು ಮಾತನಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಇವರ ಹೆಸರು ಮುಂಚೂಣಿಯಲ್ಲಿರುವ ಕಾರಣ ಕಾರ್ಯಕರ್ತರಲ್ಲೂ ಸಂತಸ ಇಮ್ಮಡಿಸಿದೆ.
