ಧಾರವಾಡದ ಹೃದಯಭಾಗದಲ್ಲೇ ನಡೆಯುತ್ತಿದೆಯಂತೆ “ಮತಾಂತರ”- ಮಾತೇ ಕೇಳದ್ದಕ್ಕೆ ‘ಡಿಸಿ’ಗೆ ಮನವಿ….
ಧಾರವಾಡ: ನಗರದ ಪ್ರಮುಖ ಪ್ರದೇಶದಲ್ಲಿ ವಾಸಿಸುತ್ತಿರುವ ಹಿಂದುಳಿದ ವರ್ಗದ ಜನರಿಗೆ ಆಮಿಷ ತೋರಿಸಿ ಮತಾಂತರ ನಡೆಯುತ್ತಿದ್ದು, ಅದನ್ನ ತಡೆಗಟ್ಟಲು ಜಿಲ್ಲಾಡಳಿತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಹೇಗೆ ಮತಾಂತರ ನಡೆಯುತ್ತಿದೆ ಎಂಬುದನ್ನ ಸ್ಥಳೀಯ ರಾಜು ಮಾಳೆ ಹೇಳಿದ್ದು, ಇಲ್ಲಿದೆ ನೋಡಿ..
ಈಗಾಗಲೇ ನೂರೈವತ್ತಕ್ಕೂ ಹೆಚ್ಚು ಜನರು ಮತಾಂತರಗೊಂಡಿದ್ದಾರೆ. ಕೆಲವರು ನಿರಂತರವಾಗಿ ಆಮಿಷ ತೋರಿಸಿ, ಹೀಗೆ ಮಾಡುತ್ತಿದ್ದಾರೆಂದು ದೂರಿದರು.
ಸಾರಸ್ವತಪುರ ಮತ್ತು ಮಸಾಲಗಾರ ಕಾಲನಿಯಲ್ಲಿ ಫಾಸ್ಟರ್ ದಿಲ್ಬರ್ ಎನ್ನುವವರು ಮತಾಂತರ ಮಾಡುತ್ತಿದ್ದಾರೆಂದು ಪ್ರತಿಭಟನೆ ನಡೆಸುತ್ತಿದ್ದವರು ಆರೋಪಿಸಿದರು.
