ಚಿಕ್ಕಮಲ್ಲಿಗವಾಡದಲ್ಲಿ ಮಹಾದುರಂತ- ತಂದೆ, ಮಗ, ಮೊಮ್ಮಕ್ಕಳು ಶವವಾಗಿ ಬಾವಿಯಲ್ಲಿ ಪತ್ತೆ…
ಧಾರವಾಡ: ಸಾಲಬಾಧೆ ಶಂಕೆ ಹಿನ್ನೆಲೆ ಒಂದೇ ಕುಟುಂಬದ ನಾಲ್ವರು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಲ್ಲಿಗವಾಡ ಗ್ರಾಮದ ನಾರಾಯಣ ಶಿಂಧೆ (42), ಈತನ ತಂದೆ ವಿಠ್ಠಲ ಶಿಂಧೆ (80) ಹಾಗೂ ನಾರಾಯಣನ ಮಕ್ಕಳಾದ ಶಿವಕುಮಾರ ಶಿಂಧೆ (12) ಹಾಗೂ ಶ್ರೀನಿಧಿ ಶಿಂಧೆ (11) ಎಂಬುವವರು ಅದೇ ಗ್ರಾಮದ ಯಲ್ಲಮ್ಮ ದೇವಾಲಯದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರು ಇಂದು ಬೆಳಿಗ್ಗೆಯೇ ಬಾವಿಗೆ ಬಿದ್ದಿದ್ದು, ದನ ಕಾಯುವವರು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ನಾರಾಯಣ ತನ್ನ ಎರಡೂ ಮಕ್ಕಳು ಹಾಗೂ ತಂದೆಯೊಂದಿಗೆ ಬಾವಿಗೆ ಹಾರಿದ್ದಾನೆ. ಈ ದುರ್ಘಟನೆಯಲ್ಲಿ ಸಾವಿಗೀಡಾದ ಹೆಣ್ಣು ಮಗುವೊಂದು ಶಾಲಾ ಸಮವಸ್ತ್ರದಲ್ಲೇ ಇದ್ದದ್ದು ಕಂಡು ಬಂದಿದೆ.
https://www.instagram.com/reel/DRUOuFFkj1m/?igsh=MXcyemxxcnJyZHRtaQ==
ನಾಲ್ಕೂ ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
