ಧಾರವಾಡ: “ಮಕ್ತುಂ ಸೊಗಲದ” V/S ‘ಫೈರೋಜಖಾನ ಪಠಾಣ’- ಪತಿಯ ರಕ್ಷಣೆಗೀಳಿದ ರೇಷ್ಮಾ ಸೊಗಲದ…!!!
ಧಾರವಾಡ: ತನ್ನ ಪತಿಗೆ ಕಾಂಗ್ರೆಸ್ ಮುಖಂಡ ಫೈರೋಜಖಾನ ಪಠಾಣ ಸೇರಿದಂತೆ ಹಲವರು ತೊಂದರೆ ಕೊಡುತ್ತಿದ್ದು, ಮಕ್ಕಳ ಸಮೇತ ನಾವೂ ಆತ್ಮಹತ್ಯೆ ಮಾಡಿಕೊಳ್ಳಬೇಕಾ ಎಂದು ಮಕ್ತುಂ ಸೊಗಲದ ಪತ್ನಿ ರೇಷ್ಮಾ ಸೊಗಲದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಶ್ನಿಸಿದ್ದಾರೆ.
ತಮ್ಮ ಪತಿಯ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಿ ತೊದರೆ ಕೊಡುತ್ತಿದ್ದಾರೆಂದು ಅಲವತ್ತುಕೊಂಡರು.
ಮಕ್ತುಂ ಸೊಗಲದಗೆ ತೊಂದರೆ ನೀಡಲಾಗುತ್ತಿದೆ. ಇದನ್ನ ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಯಿತು. ಈ ಸಮಯದಲ್ಲಿ ಹಲವರು ಉಪಸ್ಥಿತರಿದ್ದರು.
