“94ಬ್ಯಾಚಿನ” ಧಾರವಾಡ ಸಂಚಾರಿ ಠಾಣೆಯ ಹವಾಲ್ದಾರ್ ಎನ್.ಬಿ.ಭಜಂತ್ರಿ ಇನ್ನಿಲ್ಲ…
ಧಾರವಾಡ: ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾಗಿದ್ದ ಧಾರವಾಡ ಸಂಚಾರಿ ಠಾಣೆಯ ಹವಾಲ್ದಾರ್ ಇಂದು ಬೆಳಗಿನ ಜಾವ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
1994ರ ಬ್ಯಾಚಿನ ಎನ್.ಬಿ.ಭಜಂತ್ರಿ ಎಂಬುವವರೇ ತೀರಿಕೊಂಡಿದ್ದು, ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೂವರು ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನ ಅಗಲಿದ್ದಾರೆ.

ಧಾರವಾಡದ ರಕ್ಷಾ ಕಾಲನಿಯಲ್ಲಿನ ನಿವಾಸದಲ್ಲಿ ಶವವನ್ನ ತರಲಾಗಿದ್ದು, ಮೂಲತಃ ಅರಳಿಕಟ್ಡಿ ಗ್ರಾಮದವರಾಗಿದ್ದಾರೆ. ಹಿರಿಯ ಅಧಿಕಾರಿಗಳು ನಿವಾಸಕ್ಕೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
