“ಹುಬ್ಬಳ್ಳಿ ಹುಡ್ದಿ- 01” ಸಿಂಧೂರ ಲಕ್ಷ್ಮಣ ಪ್ರತಿಮೆ ಪಕ್ಕದಿಂದಲೇ ಶುರುವಾಗಿದೆ ಅನಧಿಕೃತ ವ್ಯವಹಾರ…!!!
ಹುಬ್ಬಳ್ಳಿ: ಗೋಕುಲ ರಸ್ತೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಕೋಟ್ಯಾಂತರ ರೂಪಾಯಿ ಆದಾಯ ಬರಬೇಕಿದ್ದ ಸ್ಥಳದಲ್ಲಿ ಅನಧಿಕೃತ ಬಳಕೆ ನಡೆದಿದ್ದು, ಇದೀಗ ಹೊಸ ರೀತಿಯ ನಿರ್ಮಾಣ ಕಾರ್ಯ ಎಗ್ಗಿಲ್ಲದೇ ಸಾಗಿದೆ.
ಹುಬ್ಬಳ್ಳಿ ಗೋಕುಲ ರಸ್ತೆಯ ಸಿಂಧೂರ ಲಕ್ಷ್ಮಣ ಪ್ರತಿಮೆಯ ಎಡಭಾಗದಿಂದ ಹುಬ್ಬಳ್ಳಿ ಶಹರದತ್ತ ಬರುವ ರಸ್ತೆಗಂಟಿಕೊಂಡಿರುವ ಸ್ಥಳದಲ್ಲಿ ಈಗಾಗಲೇ ಹಲವು ಅನಧಿಕೃತ ಶೆಡ್ ಮತ್ತು ಕಟ್ಟಡಗಳ ನಿರ್ಮಾಣವಾಗಿದೆ.

ಇಲ್ಲಿಂದ ಹಲವರು ಹಲವು ರೀತಿಯಲ್ಲಿ ಆದಾಯ ಮಾಡಿಕೊಳ್ಳುತ್ತಿದ್ದರೂ ಪಾಲಿಕೆಯ ವ್ಯವಸ್ಥೆ ತನಗೇನು ಗೊತ್ತೆ ಇಲ್ಲವೇನೋ ಎಂಬಂತೆ ನಡೆದುಕೊಳ್ಳುತ್ತಿದೆ. ಇಲ್ಲಿರುವ ಎಲ್ಲ ಸ್ಥರದ ವ್ಯವಹಾರದ ಸಂಪೂರ್ಣವಾದ ಮಾಹಿತಿಯನ್ನ “ಕೆವಿ” ಬಿಚ್ಚಿಡಲಿದೆ.
ಮಹಾನಗರ ಪಾಲಿಕೆ ತನ್ನ ಆದಾಯದ ಮೂಲವನ್ನ ಮರೆತಂತೆ ನಡೆದುಕೊಳ್ಳಲು ನಿಜವಾದ ಕಾರಣವಾದರೂ ಏನು ಎಂಬ ಪ್ರಶ್ನೆ ಹಲವರನ್ನ ಕಾಡುತ್ತಿದೆ.
