ಧಾರವಾಡ: “ಯೋಗ ಒಲಂಪಿಯಾಡ್” ರಾಜ್ಯಮಟ್ಟಕ್ಕೆ ಲಿಸ್ಟ್ ಕಳಿಸಿ, ಆಯ್ಕೆಯ ಹೈಡ್ರಾಮಾ… “ಎಂಥ ಮರ್ರೇ ಇದು” ವಿಷ್ಣು ಹೆಬ್ಬಾರ್…!!!
ಧಾರವಾಡ: ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ತೀರಾ ಹೇಳಲೂ ಆಗದ ಸ್ಥಿತಿಗೆ ತಲುಪಿದ್ದು, ಇಂತಹ ಸ್ಥಿತಿಗೆ ಡಿಡಿಪಿಐ ಸೇರಿ ಎಲ್ಲರೂ ತಮ್ಮಿಂದಾದ ಅಸಂಬದ್ಧ ನಿರ್ಣಯಗಳನ್ನ ತೆಗೆದುಕೊಂಡು ಹಾಳು ಮಾಡಿರುವುದು ಗೋಚರವಾಗುತ್ತಿದೆ.
ಈ ವಿಚಾರಕ್ಕೆ ಹೊಸದೊಂದು ಸಾಕ್ಷಿಯಾಗಿ ನಿಂತಿರುವುದು ರಾಜ್ಯಮಟ್ಟದ ಯೋಗ ಒಲಂಪಿಯಾಡ್ ಸ್ಪರ್ಧೆ. ಕೂಸು ಹುಟ್ಟುವ ಕುಲಾಯಿ ಹೊಲೆಸಿದರು ಎನ್ನುವ ಗಾದೆ ಮಾತನ್ನ ಮೀರಿ ನಡೆದುಕೊಳ್ಳುವ ಯತ್ನವನ್ನ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್ ಮಾಡಿರುವುದು ಸಾಕ್ಷ್ಯ ಸಮೇತ ಗೊತ್ತಾಗಿದೆ.

ನವೆಂಬರ್ 11ರಿಂದ ಮಂಡ್ಯದಲ್ಲಿ ರಾಜ್ಯಮಟ್ಟದ ಯೋಗ ಒಲಂಪಿಯಾಡ್ ಸ್ಪರ್ಧೆ ಆಯೋಜನೆಗೊಂಡಿದೆ. ಇದನ್ನ ಗಮನಿಸಿ ಜಿಲ್ಲಾಮಟ್ಟದ ಆಯ್ಕೆ ಮಾಡದೇ ತಾವೇ, ನಿಯಮ ಮೀರಿ ನಾಲ್ವರನ್ನ ಹೆಸರನ್ನ ರಾಜ್ಯಮಟ್ಟಕ್ಕೆ ಆಯ್ಕೆಯನ್ನ ಮಾಡಿ ಕಳಿಸಲಾಗಿದೆ.
ಆದರೆ, ಆಯ್ಕೆಯ ಬಗ್ಗೆ ಯಾರಿಗೂ ಗೊತ್ತಾಗದ ಮಾಡಿದ್ದು ರಾಜ್ಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಆಗ, ಎಚ್ಚೆತ್ತುಕೊಂಡಂತೆ ತೋರಿಸಿಕೊಳ್ಳಲು ಇಂದು ಆಯ್ಕೆ ಪ್ರಕ್ರಿಯೆ ಮಾಡುವ ಡ್ರಾಮಾ ಶುರುವಾಗಿದೆ.
ಆಯ್ಕೆ ಮಾಡಿ ಮಕ್ಕಳ ಹೆಸರು ಕಳಿಸಿದ ಮೇಲೆ ಮತ್ತೊಂದು ಹೈಡ್ರಾಮಾ ಮಾಡುವ ಶಾಣ್ಯಾತನ ಏಕೆ ಬಂತು ಎಂದು ಪ್ರಶ್ನಿಸಲು ಧಾರವಾಡ ಜಿಲ್ಲೆಯ ಡಿಡಿಪಿಐ ಅವರಿಗೆ ಆ ಶಾಣ್ಯಾತನ ಎಲ್ಲಿದೆ ಹೇಳಿ. ಇದು ಮುಗಿಯದ ದುರ್ವವ್ಯಸ್ಥೆ.
