“ಹುಬ್ಬಳ್ಳಿ ಹುಡ್ದಿ”- ‘ಮಕ್ಮಲ್’ ಟೋಪಿ’ ಯಾರದ್ದೋ ಭೂಮಿ, ಇನ್ಯಾರದ್ದೋ ಇಲ್ಲೀಗಲ್ ಕಟ್ಟಡ… ಕಣ್ಣಿದ್ದು ಕುರುಡಾದ ಪಾಲಿಕೆ…!!!
ಹುಬ್ಬಳ್ಳಿ: ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಯೂ ಸೇರಿದಂತೆ ಹಾಲಿ, ಮಾಜಿ ಜನಪ್ರತಿನಿಧಿಗಳು ಸಂಚರಿಸುವ ಪ್ರಮುಖ ಗೋಕುಲ ರಸ್ತೆಯಲ್ಲಿ ಕಾನೂನು ಬಾಹಿರ್ ಕಟ್ಟಡಗಳ ನಿರ್ಮಾಣ ಮತ್ತು ಅವ್ಯವಹಾರಗಳು ನಿರಂತರವಾಗಿ ನಡೆಯುತ್ತಿದ್ದು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಣ್ಣು ಮುಚ್ಚಿಕೊಂಡು ಕೂತಿದೆ.
ಹೌದು… ಕರ್ನಾಟಕವಾಯ್ಸ್.ಕಾಂ ಈ ಕುರಿತು ಸಮಗ್ರವಾದ ಮಾಹಿತಿಯನ್ನ ಹೊರ ಹಾಕಲು ಮುಂದಾಗಿದೆ. ಇಲ್ಲಿ ನಿರ್ಮಾಣವಾಗಿರುವ ಕಾನೂನು ಬಾಹಿರ್ ಕಟ್ಟಡಗಳನ್ನ ತೆರವು ಮಾಡುವ ನಿರ್ಧಾರವನ್ನ ಸಂಬಂಧಿಸಿದವರು ತೆಗೆದುಕೊಳ್ಳುವವರೆಗೆ ವಿವರವಾದ ಮಾಹಿತಿ ಹೊರಬರಲಿದೆ.

ಇಲ್ಲಿ ನಿರ್ಮಾಣವಾಗಿರುವ ಅನಧಿಕೃತ ಕಟ್ಟಡದ ಬಾಡಿಗೆಯನ್ನ ಹಲವರು ಹೊಡೆಯುತ್ತಿದ್ದಾರೆ. ರೌಡಿ ಸೋಗು ಹಾಕಿಕೊಂಡವರು ಮತ್ತು ಸಾಮಾಜಿಕವಾಗಿ ನ್ಯಾಯ ಒದಗಿಸುವ ಪೋಸು ಕೊಡುವವರು ಈ ಅವ್ಯವಹಾರದಲ್ಲಿ ತೊಡಗಿದ್ದಾರೆಂದು ಗೊತ್ತಾಗಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಕೋಟ್ಯಾಂತರ ರೂಪಾಯಿ ಆದಾಯ ಬರುವುದನ್ನ ಮರೆತು ಸುಮ್ಮನೆ ಕೂತಿರುವುದು ಅನುಮಾನ ಮೂಡಿಸಿದೆ. ಇಲ್ಲಿ ನಡೆಯುತ್ತಿರುವ ಅಕ್ರಮ ದಂಧೆಯ ಇಂಚಿಂಚೂ ವಿವರವನ್ನ “ಕೆವಿ” ನಿಮ್ಮ ಮುಂದಿಡಲಿದೆ.
