“120” ಇನ್ಸಪೆಕ್ಟರ್‌ಗಳ ವರ್ಗಾವಣೆ- ದಿಡಿಗನಾಳ ಧಾರವಾಡ ಉಪನಗರ, ಗಡ್ಡೇಕರ ಮಾಳಮಾರುತಿ ಠಾಣೆಗೆ…
ಬೆಂಗಳೂರು: ರಾಜ್ಯ ಸರಕಾರ 120 ಪೊಲೀಸ್ ಇನ್ಸಪೆಕ್ಟರ್‌ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಹಲವು ಗೊಂದಲಗಳು ಮುಂದುವರೆದಿವೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನಾಯಕರು ಕೊಟ್ಟ “ಮಿನಿಟ್ಸ್‌ಗೆ” ಬೆಲೆ ಇಲ್ಲದಿರುವುದು ಈ ಬಾರಿಯೂ ಸಾಬೀತಾಗಿದೆ.

ಧಾರವಾಡ ಉಪನಗರ ಠಾಣೆಯ ದಯಾನಂದ ಶೇಗುಣಿಸಿ ಅವರನ್ನ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿದ್ದು, ಅವರಿದ್ದ ಸ್ಥಾನಕ್ಕೆ ಸಂಗಮೇಶ ದಿಡಿಗನಾಳ ಅವರನ್ನ ವರ್ಗಾಯಿಸಲಾಗಿದೆ. ರಾಘವೇಂದ್ರ ಹಳ್ಳೂರ ತರಬೇತಿ ಶಾಲೆಗೆ ವರ್ಗಾವಣೆಗೊಂಡಿದ್ದಾರೆ.
DCRBಗೆ ವರ್ಗಸವಣೆಗೊಂಡಿದ್ದ ಸಮೀರ ಮುಲ್ಲಾ ಅವರನ್ನ ಕುಂದಗೋಳ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.
ಬೆಳಗಾವಿಯ ಸೈಬರ್ ಠಾಣೆಯ ಇನ್ಸಪೆಕ್ಟರ್ ಬಿ.ಆರ್.ಗಡ್ಡೇಕರ ಅವರು ಮಾಳಮಾರುತಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
