Exclusive ಧಾರವಾಡದಿಂದ ಹೊರಟಿದ್ದ ಕಾರು ಹುಬ್ಬಳ್ಳಿ ಬಳಿ “ಕಮರಿಗೆ”- ಗೂಗಲ್ ಮ್ಯಾಪ್ ನೋಡುತ್ತಿದ್ದ ಸಮಯದಲ್ಲಿ ದುರ್ಘಟನೆ…
ಹುಬ್ಬಳ್ಳಿ: ಧಾರವಾಡದ ಗಾಂಧಿನಗರದಿಂದ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಸ್ಥಾನಕ್ಕೆ ಹೊರಟಿದ್ದ ಕಾರೊಂದು ಗದಗ ರಸ್ತೆಯ ನಳಂದ ಕಾಲೇಜ್ ಬಳಿಯ ಸೇತುವೆ ಕೆಳಗೆ ಬಿದ್ದಿರುವ ದುರ್ಘಟನೆ ನಡೆದಿದ್ದು, ಕಾರಿನಲ್ಲಿ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪವನ ಭಜಂತ್ರಿ ಕುಟುಂಬದ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಸೇರಿ ದೇವಸ್ಥಾನಕ್ಕೆ ಹೊರಟಿದ್ದರು. ಈ ಸಮಯದಲ್ಲಿ ಗೂಗಲ್ ಮ್ಯಾಪ್ ನೋಡಲು ಮುಂದಾದ ಪವನ ಭಜಂತ್ರಿ, ಆಯತಪ್ಪಿ ಕಾರನ್ನ ಕಮರಿಗೆ ಬೀಳಿಸಿದ್ದಾರಂತೆ. ವೀಡಿಯೋ ಇದೆ ನೋಡಿ.
ಅದೇ ಮಾರ್ಗವಾಗಿ ಹೊರಟ ಸಾರ್ವಜನಿಕರು ಕಾರಿನಲ್ಲಿ ಸಿಲುಕಿದ್ದ ಐವರನ್ನ ಹೊರಗೆ ತೆಗೆದು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
