ಧಾರವಾಡ ಪತ್ರಕರ್ತರ ಸಂಘದ ಮತದಾರರೇ… ಇವರೇ ನಿಮ್ಮ ಪ್ರತಿನಿಧಿಗಳು… ಇದು ನಿಮಗೆ ಗೊತ್ತಿರಲಿ..!
ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುಮಾವಣೆಯ ಮುನ್ನವೇ ಹೊಂದಾಣಿಕೆಯಿಂದ ಹಲವು ಪ್ರಮುಖ ಹುದ್ದೆಗಳಿಗೆ ಹಿರಿಯರನ್ನ ಆಯ್ಕೆ ಮಾಡಲಾಗಿದ್ದು, ಮತದಾರರ ಪತ್ರಕರ್ತರು ಕೇವಲ ಕಾರ್ಯಕಾರಿಣಿ ಸದಸ್ಯರ ಆಯ್ಕೆಗೆ ಮತದಾನ ಮಾಡಬೇಕಿದೆ.
ಇಂದು ನಡೆದ ಅವಿರೋಧವಾಗಿ ಸರಳ ಸ್ವಭಾವದ ಬಂಡು ಕುಲಕರ್ಣಿ ಅವರು ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಬಸವರಾಜ ವಿಜಾಪುರ, ಶಿವಾನಂದ ಗೊಂಬಿ, ಪ್ರಕಾಶ ಚಳಗೇರಿ, ಪ್ರಧಾನ ಕಾರ್ಯದರ್ಶಿಯಾಗಿ ಗುರು ಭಾಂಡಗೆ, ಖಜಾಂಚಿಯಾಗಿ ತನುಜಾ ನಾಯಕ, ಕಾರ್ಯದರ್ಶಿಗಳಾಗಿ ಪ್ರಸನ್ನ ಹಿರೇಮಠ, ಶಿವಶಂಕರ ಕಂಠಿ ಸೇರಿದಂತೆ ಮತ್ತೋರ್ವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಟೈಮ್ಸ್ ಆಫ್ ಇಂಡಿಯಾದ ಹುಬ್ಬಳ್ಳಿ ಬ್ಯುರೋ ಮುಖ್ಯಸ್ಥ ಬಸವರಾಜ ಕಟ್ಟಿಮನಿ ಅವರು ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ. ಇನ್ನುಳಿದ 15 ಸದಸ್ಯರ ಆಯ್ಕೆಯಾಗಿ 25 ಪತ್ರಕರ್ತರು ಕಣದಲ್ಲಿದ್ದು, ಅವರಿಗಾಗಿ ಚುನಾವಣೆ ನಡೆಯಲಿದೆ.
