ಇವತ್ತಿನ ಸಭೆಯಲ್ಲೂ ಧಾರವಾಡ ಡಿಡಿಪಿಐ “ಕೆಳದಿಮಠರಿಗೆ ಮಂಗಳಾರತಿ”- ಪ್ಯಾ… ಪ್ಯಾ… ಕಹಾನಿ…!!!
ಧಾರವಾಡ: ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಉಸ್ತುವಾರಿ ಸಚಿವರು ಕೇಳಿದ ಪ್ರಶ್ನೆಗೆ ಸಮಂಜಸವಾದ ಉತ್ತರ ನೀಡದೇ ಬಹುತೇಕರಿಂದ ಡಿಡಿಪಿಐ ಇಂದು ಪ್ರಶ್ನೆಗೊಳಗಾದರೂ, ಉತ್ತರ ಸಿಗದ ಘಟನೆ ನಡೆಯಿತು.
ಧಾರವಾಡ ಜಿಲ್ಲೆಗೆ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರನ್ನ ತಂದಿಟ್ಟ ಮಹಾನುಭಾವರು ಯಾರೋ ಮತ್ತೂ ಇವರನ್ನ ಮುಂದುವರೆಸಿಕೊಂಡು ಹೋಗುವ ಮನಸ್ಥಿತಿ ಹೊಂದಿರುವವರೋ ಯಾರು ಮತ್ತೂ ಏಕೆ ಎಂಬ ಪ್ರಶ್ನೆ ಪ್ರಜ್ಞಾವಂತರನ್ನ ಕಾಡುತ್ತಲೇ ಇದೆ.
ಡಿಡಿಪಿಐ ಕೆಳದಿಮಠ ಕಾರ್ಯ ವೈಖರಿಯ ಬಗ್ಗೆ ಏನೇಲ್ಲಾ ನಡೆಯಿತು ಎಂಬ ವೀಡಿಯೋ ಇಲ್ಲಿದೆ ನೋಡಿ…
ಹೀಗೇಲ್ಲಾ ಮಾತಾಡಿಸಿಕೊಂಡರೂ ಡಿಡಿಪಿಐ ಕೆಳದಿಮಠ ಅವರಿಗೆ ಏನೂ ಅನಿಸೋದೆ ಇಲ್ಲ. ಮುಂದಿನ ಸಭೆಯಲ್ಲೂ ಇದೆ ಸ್ಥಿತಿ ಇರತ್ತೆ. ಮುಂದೆ ಕೂತವರು ಪ್ರಶ್ನಿಸುತ್ತಾರೆ, ಡಿಡಿಪಿಐ ಉತ್ತರವನ್ನ ಸಮಂಜಸವಾಗಿ ಕೊಡಲ್ಲ. ಇದು ಆಡೂಣ ಬಾ ಕೆಡಿಸೂಣ ಬಾ ಅಷ್ಟೇ,…
