Big Exclusive: ರಂಗಾಯಣದ ನಿರ್ದೇಶಕ “ಕಲಿಯುಗದ ಕುಡುಕ” ರಾಜು ತಾಳಿಕೋಟಿ ಇನ್ನಿಲ್ಲ….

ಧಾರವಾಡ: ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ತೀವ್ರ ಹೃದಯಾಘಾತದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.
ಶೈನ್ ಶೆಟ್ಟಿ ನಿರ್ಮಾಣದ ಶಂಕರಾಭರಣ ಸಿನೇಮಾ ಶೂಟಿಂಗ್ ವೇಳೆಯಲ್ಲಿ ಹೆಬ್ರಿಯಲ್ಲಿ ಹೃದಯಾಘಾತದಿಂದ ಬಳಲಿದ್ದು, ಸಂಜೆ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ರಾಜು ತಾಳಿಕೋಟಿಯವರು ಕನ್ನಡ ನಾಟಕ ಮತ್ತು ಚಲನಚಿತ್ರ ಹಾಸ್ಯ ನಟ. (ಮೂಲ ಹೆಸರು: ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ). ಇವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದವರು.
ಇವರು ಪ್ರಸ್ತುತ ವಿಜಯಪುರ ಜಿಲ್ಲೆಯ ತಾಳಿಕೋಟಿ ನಗರದಲ್ಲಿ ವಾಸವಾಗಿದ್ದಾರೆ. ಇವರು ಖಾಸ್ಗತೇಶ್ವರ ನಾಟಕ ಮಂಡಳಿ, ತಾಳಿಕೋಟಿಯ ಮಾಲಿಕರು. ಇವರ ಪ್ರಖ್ಯಾತ ನಾಟಕಗಳು ಕಲಿಯುಗದ ಕುಡುಕ, ಕುಡುಕರ ಸಾಮ್ರಾಜ್ಯಅಸಲಿ ಕುಡುಕ, ಈ ನಾಟಕಗಳ ಆಡಿಯೊ ಕ್ಯಾಸೆಟಗಳನ್ನೂ ಬಿಡುಗಡೆ ಮಾಡಿದ್ದಾರೆ.