ಹೋರಾಟಗಾರ “ಬಸವರಾಜ ಕೊರವರ”ಗೆ ಸಂಬಂಧಿಸಿದ ಬಹುದೊಡ್ಡ ಸುದ್ದಿಯಿದು…!!!!

ಧಾರವಾಡ: ಬಡವರ ಮಗನೆಂದೇ ಖ್ಯಾತಿ ಪಡೆದಿರುವ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಅವರ ಹೋರಾಟದ ಸ್ವರೂಪ ಬದಲಾಗಿದ್ದು, ಎಲ್ಲರೂ ನಿಷ್ಕಾಳಜಿ ವಹಿಸಿರುವ ನೂರಾರೂ ರೈತ ಕುಟುಂಬಗಳಿಗೆ ಆಧಾರವಾಗಲು ಮುಂದಾಗಿದ್ದಾರೆ.
ಹೌದು… ಧಾರವಾಡದ ಕೆಐಎಡಿಬಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ಹೋರಾಟಗಾರ ಬಸವರಾಜ ಕೊರವರ ಅವರು, ತಕ್ಷಣವೇ ರೈತರಿಗೆ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಕೆಐಎಡಿಬಿಯಲ್ಲಿ ರೈತರ ಹಣ ಕೊಡಲು ನಡೆಯುತ್ತಿರುವ ‘ಡ್ರಾಮಾ’ವನ್ನ ಸರಕಾರ ಅರ್ಥ ಮಾಡಿಕೊಳ್ಳಬೇಕಿದೆ.