ಧಾರವಾಡ: ಇನ್ಸಪೆಕ್ಟರ್ ವಿರುದ್ಧ ಷಢ್ಯಂತ್ರ ರೂಪಿಸಲು “ಮಾಜಿ ಸೈನಿಕ” ಸೆಂಟಿಮೆಂಟ್ ಬಳಕೆ… ಆಸ್ಪತ್ರೆ ಪಾಲಾಗಿರೋ ASI, PC…

ಧಾರವಾಡ: ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣವೊಂದು ಸಾಕಷ್ಟು ಸದ್ದು ಮಾಡಿ, ಪೊಲೀಸರನ್ನಷ್ಟೇ ಬಂಧಿಸಿ ಸಮಾಪ್ತಿಗೊಂಡ ಪ್ರಕರಣದಲ್ಲೀಗ ಹೊಸದೊಂದು ಟ್ವಿಸ್ಟ್ ಎದುರಾಗಿದೆ.
ಹೌದು… ಮಾಜಿ ಸೈನಿಕ ನಡೆಸುವ ಹೊಟೇಲ್‌ನಲ್ಲಿ ಎಎಸ್ಐ ಹಾಗೂ ಪೊಲೀಸ್‌ರೋರ್ವರು ಹೊಡೆದಿದ್ದ ವೀಡಿಯೋ ವೈರಲ್ ಮಾಡಲಾಗಿತ್ತು. ಅಸಲಿಗೆ ಅದಕ್ಕಿಂತ ಪೂರ್ವದಲ್ಲಿ ಪೊಲೀಸರ ಮೂಗಿನ ಮೂಳೆ ಮುರಿಯುವ ಹಾಗೆ ಹೊಡೆದಿದ್ದು ಯಾರೂ ಎಂಬ ಬಗ್ಗೆ ದೂರು ದಾಖಲಾಗಿದೆ. ಇದೇ ಸಮಯದಲ್ಲಿ ಸಂಭವನೀಯ ಹೃದಯಾಘಾತ ತಪ್ಪಿ, ಎಎಸ್ಐ ಬಂಧನಕ್ಕೊಳಗಾಗಿ ಆಸ್ಪತ್ರೆ ಪಾಲಾಗಿದ್ದಾರೆ. ಇಷ್ಟೇಲ್ಕ ನಡೆದರೂ ಇಲ್ಲಿಯವರೆಗೆ ಪೊಲೀಸರು, ಹಲ್ಲೆ ಮಾಡಿದ ಆರೋಪಿಯನ್ನ ಬಂಧನ ಮಾಡಿದೇ ಇರುವುದು ಸೋಜಿಗ ಮೂಡಿಸಿದೆ.
https://www.instagram.com/reel/DPaqv-ADsbd/?igsh=YzA5Znp6OHBmeHU3
ಈ ನಡುವೆ ಪ್ರಕರಣವನ್ನ ಇನ್ಸಪೆಕ್ಟರ್ ಮೇಲೆ ಹಾಕುವ ಷಢ್ಯಂತ್ರ ರೂಪಿತವಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಇದರಲ್ಲಿ ರಾಜಕೀಯ ನುಸುಳಿತಾ ಎಂಬ ಸಂಶಯ ಕಾಡತೊಡಗಿದೆ.
ಆಸ್ಪತ್ರೆ ಪಾಲಾಗಿರುವ ಪೊಲೀಸರ ಕುಟುಂಬದ ಗತಿಯೇನು. ಹಬ್ಬದ ಸಮಯದಲ್ಲಿ ಇಂತಹ ಸ್ಥಿತಿಗೆ ಬಂದಿರುವ ವ್ಯವಸ್ಥೆ ಎಲ್ಲಿಯದು. ಮಾಜಿ ಸೈನಿಕನಿಗೊಂದು ನ್ಯಾಯ.. ಪೊಲೀಸರಿಗೊಂದು ನ್ಯಾಯವಾ…!?
ಇಂತಹ ಪ್ರಕರಣ ಧಾರವಾಡದಲ್ಲಿ ನಡೆದಿರುವುದು ಪ್ರಜ್ಞಾವಂತರಲ್ಲಿ ಜಿಜ್ಞಾಸೆ ಮೂಡಿಸಿದೆ. ದಕ್ಷ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು, ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಬೇಕಿದೆ.