Posts Slider

Karnataka Voice

Latest Kannada News

ಏಳುಮಲೆ ಟ್ರೇಲರ್ ರಿಲೀಸ್… ಸಾಥ್ ಕೊಟ್ಟ ಡಾಲಿ-ನವೀನ್ ಶಂಕರ್ ಹಾಗೂ ಶರಣ್….

Spread the love

ಪ್ರಾಮಿಸಿಂಗ್ ಆಗಿದೆ ಏಳುಮಲೆ ಟ್ರೇಲರ್..ತರುಣ್ ಸಿನಿಮಾಗೆ ಧನಂಜಯ್-ಶರಣ್-ನವೀನ್

ಕರ್ನಾಟಕ – ತಮಿಳುನಾಡು ಗಡಿಭಾಗದ ಪ್ರೇಮಕಥೆ ಏಳುಮಲೆ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಪ್ರೇಕ್ಷಕರ ಸಮ್ಮುಖದಲ್ಲಿ ಟ್ರೇಲರ್ ರಿಲೀಸ್ ಮಾಡಲಾಯಿತು. ಕಾರ್ಯಕ್ರಮಕ್ಕೆ ನಟರಾದ ಡಾಲಿ ಧನಂಜಯ್, ನವೀನ್ ಶಂಕರ್ ಹಾಗೂ ಶರಣ್ ವಿಶೇಷ ಮೆರುಗು ನೀಡಿದರು.

ಟ್ರೇಲರ್ ಬಿಡುಗಡೆ ಬಳಿಕ ನಟ ಶರಣ್ ಮಾತನಾಡಿ, ಕನ್ನಡದ ಇವೆಂಟ್ ಇಷ್ಟು ಜನರ ಮುಂದೆ ನಡೆಯುತ್ತಿದೆ ಎನ್ನುವುದು ಈ ಚಿತ್ರದ ನಿಜವಾದ ಗೆಲುವು ಇಲ್ಲಿಂದ ಶುರುವಾಗಿದೆ. ಈ ಚಿತ್ರದ ರಿಯಲ್ ಹೀರೋ ತರುಣ್. ಅವರು ಒಂದು ಸಿನಿಮಾದ ಆಯ್ಕೆ ಹೇಗಿದೆ ಅನ್ನೋದಕ್ಕೆ ನನ್ನ ಜರ್ನಿ ಸಾಕ್ಷಿ. ಅವರು ನನ್ನ ಸಿನಿಮಾಗಳ ಕಥೆ ಆಯ್ಕೆ ಮಾಡುತ್ತಾರೆ. ಏಳುಮಲೆ ಟ್ರೇಲರ್ ನೋಡಿದರೆ ಸಿನಿಮಾ ನೋಡ್ಲೇಬೇಕು ಎನಿಸುತ್ತದೆ. ಇದು ಕಂಟೆಂಟ್ ಸಿನಿಮಾ. ಈ ಚಿತ್ರ ದೊಡ್ಡ ಹಿಟ್ ಆಗಲಿದೆ ಎಂಬ ನಂಬಿಕೆ ಇದೆ ಎಂದರು.

ನಟ ಡಾಲಿ ಧನಂಜಯ್ ಮಾತನಾಡಿ, ಏಳುಮಲೆ ಟೀಸರ್ ನೋಡಿದಾಗಿನಿಂದಲೂ ಬಹಳ ಖುಷಿ ಇದೆ. ತರುಣ್, ರಾಣಾಗೆ ಮೆಸೇಜ್ ಮಾಡಿ ಬಹಳ‌ ಎನರ್ಜಿ ಇದೆ ಎಂದಿದ್ದೆ. ತುಂಬಾ ದಿನ ಆಯ್ತು ಈ ರೀತಿ ಲವ್ ಸ್ಟೋರಿ ನೋಡದೆ. ಸಿನಿಮಾವನ್ನು ತುಂಬಾ ಫ್ಯಾಷನೆಟೆಡ್ ಆಗಿ ಮಾಡಿದ ಯಾವ ಪ್ರಯತ್ನ ಕೂಡ ಇಲ್ಲಿವರೆಗೂ ಸೋತಿಲ್ಲ. ಈ ತಂಡದಲ್ಲಿ ಪ್ರಾಮಾಣಿಕತೆ ಎದ್ದು ಕಾಣಿಸುತ್ತಿದೆ. ಆ ಪ್ರಾಮಾಣಿಕತೆಯೇ ಈ ಸಿನಿಮಾ ಗೆಲ್ಲಿಸುತ್ತದೆ ಎಂಬ ನಂಬಿಕೆ ಇದೆ. ನಂದು ತರುಣ್ ಅವರದ್ದು ಬ್ರದರ್ಸ್ ಸಂಬಂಧ. ಸಿನಿಮಾವನ್ನೇ ನಂಬಿಕೆಕೊಂಡು ಸಿನಿಮಾದಿಂದ ದುಡಿದು ಮತ್ತೆ ಸಿನಿಮಾ ಮಾಡುವುದು ಸವಾಲು. ಸಿನಿಮಾದಲ್ಲಿ ಕನಸು ಮಾತ್ರ ತೋರಿಸಲಾಗುತ್ತದೆ. ಅದಕ್ಕಾಗಿ ಫ್ಯಾಷನ್, ರಿಸ್ಕ್ ತೆಗೆದುಕೊಳ್ಳಬೇಕು. ಅದನ್ನು ತರುಣ್ ಮಾಡುತ್ತಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ನಟ ನವೀನ್ ಶಂಕರ್ ಮಾತನಾಡಿ, ಟ್ರೇಲರ್ ಬಹಳ ಚೆಂದ ಇದೆ. ಪೋಸ್ಟರ್, ಟೀಸರ್ ನೋಡಿದಲೂ ಇಷ್ಟವಾಗಿತ್ತು. ಇಂಟೆನ್ಸ್ ಎಮೋಷನ್, ಮುದ್ದಾದ ಜೋಡಿ, ಹೋರಾಟದ ಜರ್ನಿ, ಒಳ್ಳೊಳ್ಳೆ ನಟರು, ಒಳ್ಳೆ ಮ್ಯೂಸಿಕ್ ಇದೆ. ನಮ್ಮ ಟೂರಿಸ್ಟ್ ನ ಟ್ಯಾಗ್ ಲೈನ್ ಒಂದು ರಾಜ್ಯ , ಹಲವು ಜಗತ್ತು. ಈ ಸಿನಿಮಾದಲ್ಲಿ ನೀವು ಇನ್ನೊಂದು ಜಗತ್ತು ನೋಡುತ್ತೀರಾ. ಎಲ್ಲಾ ಭಾಗದ ಕಥೆಗಳು ತೆರೆಗೆ ಬರಬೇಕು. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.

ಚಿತ್ರದ ನಿರ್ಮಾಪಕ ತರುಣ್ ಸುಧೀರ್ ಮಾತನಾಡಿ, ಒಬ್ಬ ನಿರ್ದೇಶಕನಾಗಿ ನನಗೆ ಏನೂ ದುಡಿಮೆ ಬರುತ್ತದೆ ಅದನ್ನು ಇಟ್ಕೊಂಡು ಸಿನಿಮಾ ಮಾಡುತ್ತೇನೆ. ಅದಕ್ಕೆ ಅಟ್ಲಾಂಟಾ ನಾಗೇಂದ್ರ ಅವರು ನೈತಿಕ ಬೆಂಬಲವಾಗಿ ನಿಲ್ಲುತ್ತಾರೆ.‌ ತುಂಬಾ ಶ್ರಮ ಹಾಕಿ ಸಿನಿಮಾ ಮಾಡಿದ್ದೇವೆ. ಎಲ್ಲರೂ ಪ್ರೀತಿಯಿಂದ ಈ ಚಿತ್ರ ಮಾಡಿದ್ದಾರೆ. ಇದು ಪುನೀತ್ ಸಿನಿಮಾ. ಇದು ಅವನ ಪ್ರಾಮಾಣಿಕತೆ. ಏಳುಮಲೆ ಪ್ರೀತಿಯೇ ಪರಮ ಶ್ರೇಷ್ಠ ಎಂದು ಹೇಳುತ್ತದೆ. ಇದನ್ನು ನಾವು ಥ್ರಿಲ್ಲರ್ ಮೂಲಕ ಹೇಳುತ್ತಿದ್ದೇವೆ. ಇದು ನಿಮ್ಮನ್ನು ನಿರಾಶೆ ಮಾಡುವುದಿಲ್ಲ ಎಂದರು.

ಏಳುಮಲೆ ಸಿನಿಮಾ ಇದೇ ಸೆಪ್ಟೆಂಬರ್ 5ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಪುನೀತ್ ರಂಗಸ್ವಾಮಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಖ್ಯಾತ ನಟಿ ರಕ್ಷಿತಾ ಸಹೋದರ ರಾಣಾ ನಾಯಕನಾಗಿ, ಮಹಾನಟಿ ಖ್ಯಾತಿಯ ಪ್ರಿಯಾಂಕಾ ಆಚಾರ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ಏಳುಮಲೆಯ ಭಾಗವಾಗಿದ್ದಾರೆ.

ಕರ್ನಾಟಕ – ತಮಿಳುನಾಡು ನಡುವಿನ ಗಡಿಭಾಗದ ಪ್ರೇಮಕಥೆಯನ್ನು ಹೊಂದಿರುವ ಈ ಪ್ರಾಜೆಕ್ಟ್ ಗೆ ತರುಣ್ ಕಿಶೋರ್ ಸುಧೀರ್ ಅವರು ಬಂಡವಾಳ ಹೂಡಿದ್ದಾರೆ. ಅಟ್ಲಾಂಟಾ ನಾಗೇಂದ್ರ ಅವರು ಸಹ ನಿರ್ಮಾಪಕರಾಗಿ ಜೊತೆಯಾಗಿ ನಿಂತಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನ, ನಾಗಾರ್ಜುನ ಶರ್ಮಾ ಸಾಹಿತ್ಯ ಹಾಗೂ ಪುನೀತ್‌ ರಂಗಸ್ವಾಮಿ ಸಂಭಾಷಣೆ, ಡಿ.ಇಮ್ಮಾನ್ ಸಂಗೀತ ಈ ಸಿನಿಮಾಗಿದೆ.

ಹೇಗಿದೆ ಟ್ರೇಲರ್: ಏಳುಮಲೆ ಟ್ರೇಲರ್ ಸಖತ್ ಪ್ರಾಮಿಸಿಂಗ್ ಆಗಿದೆ. ಆಕ್ಷನ್, ಎಮೋಷನ್, ಒಂದೊಳ್ಳೆ ಲವ್ ಸ್ಟೋರಿ ಜೊತೆಗೆ ಥ್ರಿಲ್ಲಿಂಗ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. ಒಂದೊಳ್ಳೆ ಕಥೆಯನ್ನು ಚಿತ್ರತಂಡ ಪ್ರೇಕ್ಷಕರಿಗೆ ಉಣಬಡಿಸುವ ಕಾತರದಲ್ಲಿದೆ.


Spread the love

Leave a Reply

Your email address will not be published. Required fields are marked *