ಹುಬ್ಬಳ್ಳಿ-ಧಾರವಾಡಕ್ಕೆ “ಭೂತ”ದಂತಾದ ಬಿಆರ್‌ಟಿಎಸ್ ಚಿಗರಿ ಬಸ್- ಯುವಕನಿಗೆ ಗಾಯ, ತೀವ್ರ ಆಕ್ರೋಶ…

ಧಾರವಾಡ: ಅವಳಿನಗರದ ಜನರ ನೆಮ್ಮದಿಯ ಸಂಚಾರಕ್ಕೆ ಕಾರಣವಾಗಬೇಕಾಗಿದ್ದ ಬಿಆರ್‌ಟಿಎಸ್ ಚಿಗರಿ ಬಸ್, ಜನರ ಬದುಕಿಗೆ ಶಾಪವಾಗಿ ಮಾರ್ಪಟ್ಟು ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ.
ಹೌದು… ಬಿಆರ್‌ಟಿಎಸ್ ಮಾರ್ಗದಲ್ಲಿ ಇಂದು ಮತ್ತೆ ಚಿಗರಿ ಬಸ್ ಅವಘಡವನ್ನ ಮಾಡಿದೆ. ಹಾಗಾಗಿ, ರೊಚ್ಚಿಗೆದ್ದ ಜನರು ನವಲೂರ ಸೇತುವೆ ಬಳಿ ಪ್ರತಿಭಟನೆ ನಡೆಸಿದರು.
ವೀಡಿಯೋ…
ಪೊಲೀಸರ ಮಧ್ಯಸ್ತಿಕೆಯಿಂದ ರಸ್ತೆ ತಡೆ ಹಿಂದೆ ಪಡೆದ ಸಾರ್ವಜನಿಕರು, ಚಿಗರಿ ಬಸ್ ಸಂಚಾರ ಬಂದ್ ಮಾಡುವಂತೆ ಆಗ್ರಹಿಸಿದರು.