ಮಳೆಯಿಂದ ತತ್ತರಿಸಿದವರ ಹೆಗಲಿಗೆ ಹೆಗಲಾಗುವ ಸಂಕಲ್ಪ ತೊಟ್ಟ ಧಣಿ, ಸೀಮಕ್ಕಾ…!!!

ಧಾರವಾಡ: ನಿರಂತರ ಮಳೆಯಿಂದ ತತ್ತರಿಸಿ ಹೋಗಿರುವ ರೈತರ ಹೊಲಗಳಿಗೆ ಭೇಟಿ ನೀಡಿದ ಭಾರತೀಯ ಜನತಾ ಪಕ್ಷದ ಮಾಜಿ ಶಾಸಕದ್ವಯರು, ಬೆಳೆಗಳಿಗೆ ಆಗಿರುವ ಹಾನಿಯನ್ನ ವೀಕ್ಷಣೆ ಮಾಡಿದರು.
ಧಾರವಾಡ-71 ಕ್ಷೇತ್ರದ ಅಮ್ಮಿನಬಾವಿ, ಹೆಬ್ಬಳ್ಳಿ ಗ್ರಾಮದ ಸುತ್ತಮುತ್ತ ಪ್ರದೇಶದಲ್ಲಿನ ಬೆಳೆ ಹಾನಿಯನ್ನ ಮಾಜಿ ಶಾಸಕರುಗಳಾದ ಅಮೃತ ದೇಸಾಯಿ ಹಾಗೂ ಸೀಮಾ ಮಸೂತಿ ಅವರು ವೀಕ್ಷಣೆ ಮಾಡಿದರು.
ವೀಡಿಯೋ…
ರೈತರಿಗೆ ಪರಿಹಾರ ನೀಡದೇ ಇದ್ದರೇ ಅಹೋರಾತ್ರಿ ಧರಣಿ ಆರಂಭಿಸುವುದಾಗಿ ಎಚ್ಚರಿಸಿದ ಮಾಜಿ ಶಾಸಕ ಅಮೃತ ದೇಸಾಯಿ, ರೈತರ ಪರವಾಗಿ ಬೀದಿಗಿಳಿಯುವುದು ನಿಶ್ಚಿತ ಎಂದರು.
ಬಸವರಾಜ ತಂಬಾಕದ, ಗಂಗಾಧರ ಪಾಟೀಲ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.