ಧಾರವಾಡ: ತೆರೆದ ಬಾಗಿಲಿನ ಮೂಲಕ ಚಿನ್ನ ಎಗರಿಸಿದ್ದ ‘ಖದೀಮ’- 78 ಗಂಟೆಯೊಳಗೆ ಅಂದರ್ ಮಾಡಿದ PI ‘ಸಂಗಮೇಶ ದಿಡಿಗನಾಳ’ ಟೀಂ…

ಧಾರವಾಡ: ತೆರೆದ ಬಾಗಿಲಿನ ಒಳಗೆ ನುಗ್ಗಿ ಮಂಗಳಸೂತ್ರ ಕದ್ದು ಪರಾರಿಯಾಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ಧಾರವಾಡ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ತಂಡ ಯಶಸ್ವಿಯಾಗಿದೆ.
ಹಿರೇಮಠ ಓಣಿಯ ಸಾಭ್ಳೆ ಕಟ್ಟಡದಲ್ಲಿನ ನಿವಾಸಿ ವಿಜಯ ಕೋಟಕರ ಎಂಬುವವರ ಮನೆಗೆ ನುಗ್ಗಿ 420000 ಸಾವಿರ ರೂಪಾಯಿ ಮೌಲ್ಯದ ನಾಲ್ಕು ತೊಲೆ ಮಂಗಳಸೂತ್ರ ಕದ್ದಿದ್ದ ಜನ್ನತನಗರದ ಬಾಬಾಜಾನ ಮೆಹಬೂಬಸಾಬ ಸಂಶಿ ಎಂಬ ಆರೋಪಿಯನ್ನ ಬಂಧಿಸಲಾಗಿದೆ.
ವೀಡಿಯೋ….
ಆರೋಪಿಯಿಂದ ಮಂಗಳಸೂತ್ರ ಮತ್ತು 6 ಮೊಬೈಲ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಅವರ ಟೀಂನ ಪಿಎಸ್ಐಗಳಾದ ಮಲ್ಲಿಕಾರ್ಜುನ ಹೊಸೂರ, ಎಂ.ಆರ್.ಮಲ್ಲಿಗವಾಡ, ಎಲ್.ಕೆ.ಕೊಡಬಾಳ, ಐ.ಐ.ಮದರಖಂಡಿ, ಎಎಸ್ಐ ತಮ್ಮಾಜಿರಾವ್ ತಲವಾಯಿ, ಸಿಬ್ಬಂದಿಗಳಾದ ಜಿ.ಜಿ.ಚಿಕ್ಕಮಠ, ಐ.ಎಸ್.ಲಕ್ಕಮ್ಮನವರ, ಎಂ.ಸಿ.ಮಂಕಣಿ, ಲಕ್ಷ್ಮಣ ಲಮಾಣಿ, ಮೌನೇಶ ಚವ್ಹಾಣ, ಸಾಗರ ಕುಂಕುಮಗಾರ, ಉಷಾ ಎಂ.ಎಚ್, ಶಿವಾನಂದ ಕೆಂಪೋಡಿ ಕಾರ್ಯಾಚರಣೆಯಲ್ಲಿದ್ದರು.