“ಹೊಡೆದಮನಿ” ಯಾರೂ ಎಂಬುದನ್ನ ಅವನೇ ಕಮೀಷನರ್ ಬಳಿ ಘೋಷಣೆ ಮಾಡ್ಕೋತಾನಂತೆ…!!!

ಧಾರವಾಡ: ತನ್ನದೇ ಇಲಾಖೆಯವರಿಂದ ಲಂಚದ ಹಣ ಪಡೆಯುತ್ತಿದ್ದ ಗಿರಾಕಿಯೋರ್ವ ತಾನೇ ‘ಹೊಡೆದಮನಿ’ ಎಂದು ಘೋಷಣೆ ಮಾಡಿಕೊಳ್ಳುವುದಕ್ಕೆ ನಖಶೀಖಾಂತವಾಗಿ ಸಿದ್ಧತೆ ನಡೆಸಿದ್ದಾನೆಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.
ತನ್ನದೇ ಸಮಾಜದವರನ್ನ ಆಯಕಟ್ಟಿನ ಜಾಗದಲ್ಲಿ ಕೂಡಿಸಿ ಭ್ರಷ್ಟಾಚಾರ ಮಾಡುತ್ತಿರುವ ವಿಷಯ ಆತನಿರುವ ಕಚೇರಿಯ ಪ್ರತಿ ಗೋಡೆಗೆ ಗೊತ್ತಿದೆ. ಹಲವು ಗೊಂದಲಗಳ ರೂವಾರಿಯಾಗಿರುವ ಈತನ ಬಗ್ಗೆ ನೂರೆಂಟು ದೂರುಗಳಿವೆ.
ಕರ್ನಾಟಕವಾಯ್ಸ್.ಕಾಂ ‘ಹೊಡೆದಮನಿ’ ಎಂಬ ಶೀರ್ಷಿಕೆಯ ಜೊತೆಗೆ ಮಾಹಿತಿ ಹೊರ ಹಾಕುತ್ತಿದ್ದ ಹಾಗೇ ಕನಲಿ ಹೋಗಿರುವ ಮನಿ ಹೊಡೆದವ, ‘ನಾನು ಕಮೀಷನರ್ ಬಳಿ ಹೋಗಿ ಕಂಪ್ಲೇಟ್ ಕೊಡ್ತೇನಿ, ಕೇಸ್ ಹಾಕ್ತೇನಿ’ ಎಂದು ತನಗನಿಸಿದ ರೀತಿಯಲ್ಲಿ ಬಾಯಿ ಬಡಿದುಕೊಳ್ಳುತ್ತಿದ್ದಾನಂತೆ.
ಈ ಮೂಲಕ ಹೊಡೆದಮನಿ ಯಾರೂ ಎಂಬುದು ನಿಖರವಾಗಿ ಗೊತ್ತಾಗಿದ್ದು, ಕಮೀಷನರ್ ಬಳಿ ಹೋಗಿ ಘೋಷಣೆಯಾದ ತಕ್ಷಣವೇ ಪೋಟೊ ಸಮೇತ ಮನಿ ಹೊಡೆಯುತ್ತಿರುವ ಆಸಾಮಿ ಯಾರೂ ಎಂಬುದು ಗೊತ್ತಿಲ್ಕದವರ ಅರಿವಿಗೂ ಬರಲಿ. ಆದಷ್ಟು ಬೇಗನೇ ಘೋಷಣೆ ಮಾಡಿಕೊಳ್ಳಲಿ ಎಂಬುದು ಧಾರವಾಡದ ಶಿಕ್ಷಣ ವ್ಯವಸ್ಥೆಯನ್ನ ಸುಧಾರಿಸುವ ಪ್ರತಿಯೊಬ್ಬರ ಬಯಕೆಯಾಗಿದೆ.