Karnataka Voice

Latest Kannada News

ಹೊಂಬಾಳೆ ಫಿಲಮ್ಸ್‌ನ ‘ಕಾಂತಾರ ಚಾಪ್ಟರ್ 1’ ಕುಲಶೇಖರನ ಪಾತ್ರದಲ್ಲಿ ಗುಲ್ಶನ್ ದೇವಯ್ಯ….

Spread the love

ಬಹು ನಿರೀಕ್ಷಿತ ಚಿತ್ರ ‘ಕಾಂತಾರ ಚಾಪ್ಟರ್ 1’ ನಲ್ಲಿ ಜನಪ್ರಿಯ ನಟ ಗುಲ್ಶನ್ ದೇವಯ್ಯ ಅವರು ಪ್ರಮುಖ ಪಾತ್ರವಾದ ಕುಲಶೇಖರನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೊಂಬಾಳೆ ಫಿಲಮ್ಸ್ ಘೋಷಿಸಿದೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರ, ಜಾಗತಿಕವಾಗಿ ಮೆಚ್ಚುಗೆ ಗಳಿಸಿದ ‘ಕಾಂತಾರ’ (2022) ದ ಹಿಂದಿನ ಅಧ್ಯಾಯವಾಗಿದ್ದು, ಹೊಂಬಾಳೆ ಫಿಲಮ್ಸ್‌ನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಈ ಚಿತ್ರವು ಸಂಸ್ಕೃತಿ, ಜಾನಪದ ಮತ್ತು ಅದ್ಭುತ ಕಥಾಹಂದರದ ಆಳವಾದ ಪದರಗಳನ್ನು ಪರಿಶೋಧಿಸಲಿದೆ.

ರಿಷಬ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಕಾಂತಾರ ಚಾಪ್ಟರ್ 1’ ಪ್ರಬಲ ನಿರೂಪಣೆ ಮತ್ತು ಅದ್ಭುತ ದೃಶ್ಯಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಲು ಸಿದ್ಧವಾಗಿದೆ. ಗುಲ್ಶನ್ ದೇವಯ್ಯ ಅವರ ಆಗಮನವು ಚಿತ್ರದ ದೊಡ್ಡ ಜಗತ್ತಿಗೆ ಹೊಸ ಆಯಾಮವನ್ನು ಸೇರಿಸಿದೆ. ಈ ಚಿತ್ರವು 2025ರ ಅಕ್ಟೋಬರ್ ತಿಂಗಳಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.


Spread the love

Leave a Reply

Your email address will not be published. Required fields are marked *