ಧಾರವಾಡ: ಶಿಕ್ಷಣ ಇಲಾಖೆಗೆ “ಕಳಂಕ”ವಾಗಿರೋ ‘ಹೊಡೆದಮನಿ’- ನಿಲ್ಲದ ಭ್ರಷ್ಟಾಚಾರ…

ಧಾರವಾಡ: ಶಿಕ್ಷಣ ಇಲಾಖೆಯ ಪ್ರಮುಖ ಕಚೇರಿಯಲ್ಲಿ ಪ್ರಮುಖ ಹುದ್ದೆ ಹೊಂದಿರುವ ಅಧಿಕಾರಿಯೋರ್ವ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಕರ್ನಾಟಕವಾಯ್ಸ್.ಕಾಂ ದಾಖಲೆ ಸಮೇತ ಮಾಹಿತಿಯನ್ನ ಹೊರ ಹಾಕಲಿದೆ.
ಈಗಾಗಲೇ ಭ್ರಷ್ಟಾಚಾರದಲ್ಲಿ ಮುಳುಗಿ ಅವರಿವರ ಕೈಕಾಲು ಹಿಡಿದು ಮತ್ತೆ ಅದೇ ದಂಧೆಯಲ್ಲಿ ಮುಳುಗಿರುವುದಲ್ಲದೇ, ತನ್ನದೇ ಕುಲದವರನ್ನ ಆಯಕಟ್ಟಿನ ಜಾಗದಲ್ಲಿ ಕೂಡಿಸಿರುವುದನ್ನೂ ದಾಖಲೆಗಳ ಸಮೇತ ಹೊರಬರಲಿದೆ.
ಗುತ್ತಿಗೆ ಆಧಾರದಲ್ಲಿ ನೌಕರಿ ಮಾಡುವವರ ವಿರುದ್ಧವೂ ಹಗೆ ಸಾಧಿಸಲು ನಿಂತಿರುವ ಈ ‘ಮಖೇಡಿ’ ಅಧಿಕಾರಿಯ ಬಂಡವಾಳ ಹೊರ ಬೀಳಲಿದೆ. ವಿಸೀಟ್ ನೋಟೀಸ್ ಕಳಿಸಿ ಐದು ಸಾವಿರ ಪಡೆಯುವುದರಿಂದ ಹಿಡಿದು ಸರಕಾರದ ಕೋಟಿ ಕೋಟಿ ಅನುದಾನದ ಲೆಕ್ಕ ಯಾರ ಜೇಬಲ್ಲಿ ಇರಬಹುದು ಎಂಬುದು ಹೊರಬರಲಿದೆ.
ಕರ್ನಾಟಕವಾಯ್ಸ್.ಕಾಂ ಹೊಡೆದಮನಿಯ ವೃತ್ತಾಂತವನ್ನ ಹೊರ ಹಾಕಲಿದೆ.