ಧಾರವಾಡ: ಮೈ ಜುಂ ಎನ್ನೋ ಪ್ರಕರಣ… 5ವರ್ಷದ ಬಾಲಕ ಸಾವು, ತಂದೆಯ ಸ್ಥಿತಿ ಗಂಭೀರ…!!!

ಧಾರವಾಡ: ಮನೆಯಲ್ಲಿ ಪಾಲಕರ ಚಿಕ್ಕದೊಂದು ನಿರ್ಲಕ್ಷ್ಯ ಎಷ್ಟೊಂದು ದೊಡ್ಡ ಅವಘಡಕ್ಕೆ ಕಾರಣವಾಗತ್ತೆ ಎಂಬ ಮಾತಿಗೆ ಧಾರವಾಡ ಕೆಲಗೇರಿ ರಸ್ತೆಯ ಸಂತೋಷ ನಗರದ 2ನೇ ಕ್ರಾಸ್‌ನಲ್ಲಿ ನಡೆದ ಘಟನೆಯೊಂದು ಸಾಕ್ಷ್ಯ ನುಡಿಯುವಂತಿದೆ.
5 ವರ್ಷದ ಅಗಸ್ತ್ಯ ಮಾಶ್ಯಾಳ ಎಂಬ ಬಾಲಕ ಆಟವಾಡುತ್ತ ಒಲೆಯ ಸಮೀಪದಲ್ಲಿಟ್ಟಿದ್ದ ಥಿನ್ನರ್ ಬಾಟಲಿಯನ್ನ ಎಳೆದು ಚೆಲ್ಲಿದಾಗ ಇಡೀ ಮೈಗೆ ಬೆಂಕಿ ಆವರಿಸಿದೆ. ಇದನ್ನ ತಡೆಯಲು ಹೋದ ಮಗುವಿನ ತಂದೆ ಚಂದ್ರಕಾಂತರಿಗೂ ತೀವ್ರ ಸ್ವರೂಪದ ಗಾಯಗಳಾಗಿವೆ.
ಮಗುವನ್ನ ಚಿಕಿತ್ಸೆಗಾಗಿ ಕಿಮ್ಸಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಗು ಅಗಸ್ತ್ಯ ಸಾವಿಗೀಡಾಗಿದ್ದು, ತಂದೆಗೆ ಚಿಕಿತ್ಸೆ ಮುಂದುವರೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.