“ರೋಚಕ”- ಡಿಜಿಟಲ್ ಯುಗದ “INSTA” ಕಳ್ಳನನ್ನ ಹೆಡಮುರಿಗೆ ಕಟ್ಟಿದ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಟೀಂ…

ಚಾಲಾಕಿ ಕಳ್ಳ ಹುಸೇನಸಾಬ ಪೊಲೀಸ್ ಸುಪರ್ಧಿಯಲ್ಲಿ ಇದ್ದಾಗಲೇ ತಪ್ಪಿಸಿಕೊಂಡು ಹೋಗಿ ಎಂಟು ವರ್ಷಗಳೇ ಕಳೆದಿದ್ದವು
ಆರೋಪಿ ಇನ್ಸ್‌ಸ್ಟಾಗ್ರಾಂ ಮೂಲಕ ಸಹಚರರನ್ನ ಕರೆಸಿಕೊಳ್ಳುತ್ತಿದ್ದ. ಜಾಗದ ಮಾಹಿತಿಯೂ ಅಲ್ಲಿಂದಲೇ ರವಾನೆ
ಧಾರವಾಡ: ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಗಿರಿನಗರದಲ್ಲಿ ಬೈಕ್ ದರೋಡೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯ ಬೆನ್ನತ್ತಿದ್ದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 9 ಕಳ್ಳತನ ಪ್ರಕರಣಗಳನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಧಾರವಾಡದ ಗಿರಿನಗರದ ಪೊಲೀಸ್ ಟ್ರೇನಿಂಗ್ ಸ್ಕೂಲ್ ಬಳಿ ಸಿದ್ದರಾಮಯ್ಯ ಹಿರೇಮಠ ಎಂಬುವರಿಗೆ ಸೇರಿದ ಬೈಕ್ ದೋಚಲು ಯತ್ನಿಸಿದ್ದರು. ಈ ಬಗ್ಗೆ ಸಿದ್ದರಾಮಯ್ಯ ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು.
ಎಕ್ಸಕ್ಲೂಸಿವ್ ವೀಡಿಯೋ….
ಪ್ರಕರಣ ದಾಖಲು ಮಾಡಿಕೊಂಡ ವಿದ್ಯಾಗಿರಿ ಠಾಣೆಯ ಇನ್ಸ್‌ಪೆಕ್ಟರ್ ಸಂಗಮೇಶ ದಿಡಿಗನಾಳ ನೇತೃತ್ವದ ತಂಡ ಹುಸೇನಸಾಬ ಕನವಳ್ಳಿ ಎಂಬ ಖದೀಮನನ್ನ ಬಂಧಿಸಿ ವಿಚಾರಣೆ ಮಾಡಿದಾಗ ಪೊಲೀಸರೇ ಶಾಕ್ ಆಗಿದ್ದಾರೆ.
ಹುಸೇನಸಾಬ ಈಗಾಗಲೇ ಬೈಕ್ ದೋಚಿದ ಪ್ರಕರಣ ಸೇರಿದಂತೆ ಹಿಂದೆ ಕೂಡ 8 ಮನೆ ಕಳ್ಳತನ ಮಾಡಿರೋ ಮಾಹಿತಿ ಬೆಳಕಿಗೆ ಬಂದಿದೆ. ಆರೋಪಿಯಿಂದ 850000 ಮೌಲ್ಯದ ಚಿನ್ನಾಭರಣ ಹಾಗೂ ಒಂದು ಬೈಕ್ ವಶಕ್ಕೆ ಪಡೆದು ಆರೋಪಿ ಹುಸೇನಸಾಬನನ್ನು ಜೈಲಿಗೆ ಅಟ್ಟಿದ್ದಾರೆ.
9 ಕಳ್ಳತನ ಪ್ರಕರಣವನ್ನು ಭೇದಿಸಿದ ವಿದ್ಯಾಗಿರಿ ಠಾಣೆಯ ಪೊಲೀಸರ್ ಕಾರ್ಯಕ್ಕೆ ಕಮೀಷನರ್ ಎನ್. ಶಶಿಕುಮಾರ್, ಡಿಸಿಪಿ ಮಹಾನಂದ ನಂದಗಾವಿ, ರವೀಶ್ ಸಿ.ಆರ್ ಹಾಗೂ ಎಸಿಪಿ ಪ್ರಶಾಂತ ಸಿದ್ಧನಗೌಡರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.