ಶಿಕ್ಷಣ ಇಲಾಖೆಯಲ್ಲಿ ನಿಲ್ಲದ ಭ್ರಷ್ಟರ ಅಟ್ಟಹಾಸ… ಹೆಗ್ಗಣಗಳ ತೆರವಿಗಾಗಿ ಕ್ಷಣಗಣನೆ…

ಧಾರವಾಡ: ಕಳೆದ ತಿಂಗಳು ಸಭಾಪತಿ ಬಸವರಾಜ ಹೊರಟ್ಟಿಯವರು ಒಂದೇ ಕಚೇರಿಯಲ್ಲಿ ಏಳು ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವ ಶಿಕ್ಷಣ ಇಲಾಖೆ ನೌಕರರನು ಬೇರೆ ಜಿಲ್ಲೆಗೆ ವರ್ಗಾಯಿಸಬೇಕೆಂದು ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ಆಗ್ರಹಿಸಿದ್ದರು.
ಆದರೆ ಇದೀಗ, ಕೆಲ ಭ್ರಷ್ಟರ ಒತ್ತಡದಿಂದಾಗಿ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಎನ್ನುವಂತೆ ಕೆಲ ಅಮಾಯಕ ನೌಕರರ ವಿರುದ್ಧ ವ್ಯಯಕ್ತಿಕ ದ್ವೇಷದ ಹಿನ್ನಲೇಯಲ್ಲಿ ಶಾ-Money ವರ್ಗಮಾಡಿಸುವಲ್ಲಿ ಹಠ ಸಾಧಿಸಿದ್ದಾಳೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿವೆ.
ಬಸವರಾಜ ಹೊರಟ್ಟಿಯವರು ಕಳೆದ ತಿಂಗಳೇ ಪತ್ರ ನೀಡಿ ವರ್ಗಾವಣೆಗೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿದ್ಯಾಗಲೂ ಕೂಡಾ, ಸದ್ಯ ಸಭಾಪತಿಯವರು ಅಮೆರಿಕಾದ ಬೋಸ್ಟನ್ನ ಸಮ್ಮೇಳನ ಒಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲೇ, ಬೇಕಂತಲೇ ಕೆಲವರ ಇಚ್ಛಾಪೂರ್ವಕವಾಗಿ ಈ ವರ್ಗಾವಣೆ ಡ್ರಾಮಾ ಕೈಗೊಳ್ಳಲಾಗಿದೆ ಎಂದು ಅನ್ಯಾಯಕ್ಕೆ ಒಳಗಾದ ನೌಕರರು ಆರೋಪಿಸುತ್ತಿದ್ದಾರೆ.
‘ನಾವು ಇದೇ ಕಚೇರಿಯಲ್ಲೇ 10-15 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಒಂದೇ ಒಂದು ಕೂದಲು ಕೂಡಾ ಅಧಿಕಾರಿಗಳು ಕೊಂಕಿಸಿರುವುದಿಲ್ಲ’ ಎಂದು ಕುಹಕವಾಡುವ ಶಾ-Money & ಗ್ಯಾಂಗ್ ಕಳೆದ 10 ವರ್ಷದಿಂದ ಶಾ-Money ಕಚೇರಿಯಲ್ಲಿ ಅನಭಿಷಿಕ್ತ ಮಹಾರಾಣಿಯಂತೆ ಸೊಕ್ಕಿನಿಂದ ಮೆರೆಯುತ್ತಿದ್ದಾಳೆ ಎಂದು ಹೆಸರು ಹೇಳಲು ಇಚ್ಚಿಸದ ಕಚೇರಿಯ ಅಧಿಕಾರಿಯೊಬ್ಬರು ‘ಕೆವಿ’ಯೊಂದಿಗೆ ಮಾಹಿತಿ ಹಂಚಿಕೊಳ್ಳುವಾಗ ಅವರ ಧ್ವನಿಯಲ್ಲಿ ಅಜ್ಞಾತ ಭಯ ಕಾಡುತ್ತಿತ್ತು.
ಏತನ್ಮಧ್ಯೆ, ಇಲಾಖೆಯಲ್ಲಿ ವರ್ಗಾವಣೆಗೊಂಡ ನೌಕರರು ಅವರಿಗೆ ವರ್ಗಾಯಿಸಿದ ಸ್ಥಳಗಳಿಗೆ ಹಾಜರಾಗುವ ಅನಿವಾರ್ಯತೆ ಶಾ-Moneyಯೇ ಸೃಷ್ಠಿ ಮಾಡಿಸಿದ್ದು ಎನ್ನಲಾಗುತ್ತಿದ್ದು, ಕೆಲವರು ಈಗಾಗಲೇ ವರ್ಗಾವಣೆಗೊಂಡ ಸ್ಥಳಗಳಿಗೆ ಹಾಜರಾಗಿದ್ದು, ಇನ್ನು ಕೆಲವರು ಸಭಾಪತಿಯರು ಭಾರತಕ್ಕೆ ವಾಪಸ್ಸಾಗುವಿಕೆಗಾಗಿ ಕಾಯುತ್ತಿದ್ದು, ತಮಗಾದ ಅನ್ಯಾಯದ ಕುರಿತು ಮನವರಿಕೆ ಮಾಡಲಿದ್ದು, ಒಂದು ವೇಳೆ ತಮಗೆ ನ್ಯಾಯ ಸಿಗದಿದ್ದಲ್ಲಿ ಅಪರ ಆಯುಕ್ತಾಲಯ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಲಿಖಿತ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.