Karnataka Voice

Latest Kannada News

ಸೂಪರ್ ಹೀರೋ ತೇಜ್ ಸಜ್ಜಾ ನಟನೆಯ ಮಿರಾಯ್ ಸಿನಿಮಾದ ಮೊದಲ ಹಾಡಿಗೆ ಭರ್ಜರಿ ರೆಸ್ಪಾನ್ಸ್…

Spread the love

‘ಹನುಮಾನ್’ ಖ್ಯಾತಿಯ ನಟ ತೇಜ್ ಸಜ್ಜಾ ನಟನೆಯ ‘ಮಿರಾಯ್’ ಚಿತ್ರ ಮೂಲಕ ಬರಲು ಸಜ್ಜಾಗಿದ್ದಾರೆ. ‘ಹನುಮಾನ್’ ಚಿತ್ರ ಆದ್ಮೇಲೆ ಮಾಡಿರೋ ಮತ್ತೊಂದು ಸೂಪರ್ ಹೀರೋ ಚಿತ್ರವೇ ಇದಾಗಿದೆ. ಬಹುಭಾಷೆಯಲ್ಲಿಯೇ ಬರುತ್ತಿರುವ ಈ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ.

‘ವೈಬ್ ಐತೆ ಬೇಬಿ’ ಎಂದು ನಾಯಕ ತೇಜ್ ಸಜ್ಜಾ ಮತ್ತು ರಿತಿಕಾ ನಾಯಕ್ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ಕನ್ನಡದಲ್ಲಿಯೂ ಈ ಹಾಡು ರಿಲೀಸ್ ಆಗಿದ್ದು, ಅರ್ಮಾನ್ ಮಲಿಕ್ ಧ್ವನಿಯಾಗಿದ್ದಾರೆ. ಗೌರ ಹರಿ ಸಂಗೀತ ನೀಡಿದ್ದಾರೆ, ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದಾರೆ.

‘ಮಿರಾಯ್’ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್‌ಗಳಿವೆ. ಈ ಆ್ಯಕ್ಷನ್ ಚಿತ್ರವನ್ನ ಕಾರ್ತಿಕ್ ಘಟ್ಟಮನೇನಿ ಡೈರೆಕ್ಷನ್ ಮಾಡಿದ್ದಾರೆ. ವಿಶೇಷವಾಗಿ ಈ ಚಿತ್ರ 2ಡಿ ಮತ್ತು 3ಡಿ ರೂಪದಲ್ಲಿಯೇ ಸಿನಿಮಾ ರಿಲೀಸ್ ಆಗುತ್ತಿದೆ. ಅತೀ ದೊಡ್ಡ ಮಟ್ಟದಲ್ಲಿಯೇ ಈ ಚಿತ್ರ ರಿಲೀಸ್ ಆಗುತ್ತಿದೆ. ಸೆಪ್ಟೆಂಬರ್ 5ರಂದು ಮಿರಾಯ್ ಬಿಡುಗಡೆಯಾಗಲಿದೆ.

‘ಮಿರಾಯ್’ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಸಿನಿಮಾ ಹೇಳುತ್ತದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಅಡಿ ಟಿ.ಜಿ.ವಿಶ್ವಪ್ರಸಾದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಮನೋಜ್ ಮಂಚು ಖಳನಾಯಕನಾಗಿ ಮತ್ತು ನಾಯಕಿಯಾಗಿ ರಿತಿಕಾ ನಾಯಕ್‌ ನಟಿಸಿರುವ ಈ ಚಿತ್ರದಲ್ಲಿ ಡಿಫರೆಂಟ್ ರೋಲ್‌ನಲ್ಲಿ ತೇಜ್ ಸಜ್ಜಾ ನಟಿಸುತ್ತಿದ್ದಾರೆ. ಕಾರ್ತಿಕ್ ‘ಮಿರಾಯ್’ಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶನ, ಗೌರ ಹರಿ ಸಂಗೀತ ಚಿತ್ರಕ್ಕಿದೆ.


Spread the love

Leave a Reply

Your email address will not be published. Required fields are marked *