ಬಿಜೆಪಿ ಅಧಿಕಾರದಲ್ಲಿದ್ದು “11ವರ್ಷ” ಆಯಿತು: ಹಿಂದುಗಳು ‘ಖತ್ರೇ ಮೈ ಹೈ’ ಅಂದ್ರೇ ಏನರ್ಥ: ಸಚಿವ ಸಂತೋಷ ಲಾಡ ವ್ಯಂಗ್ಯ…

ಉತ್ತರಕನ್ನಡ: ದೇಶದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದು ಹನ್ನೊಂದು ವರ್ಷ ಆಗಿದೆ. ಈಗಲೂ ಹಿಂದುಗಳಿಗೆ ಸಮಸ್ಯೆಯಿದೆ ಎಂದು ಹೇಳುತ್ತಿರುವುದು ಏಕೆ ಎಂದು ರಾಜ್ಯದ ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.
ಕಾರವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಮಾತನಾಡಿದ ಸಚಿವ ಸಂತೋಷ ಲಾಡ್ ಅವರು, ದೇಶದಲ್ಲಿ ಯಾವುದೇ ಹಿಂದುಗಳು “ಖತ್ರೆ”ಯಲ್ಲಿ ಇಲ್ಲವೆಂದರು.
ಶ್ರೀರಾಮನ ಮಂದಿರವನ್ನೂ ಜನರ ದುಡ್ಡಿಂದ ಕಟ್ಟಲಾಗಿದೆ. ದೇಶದಲ್ಲಿ ಏಳು ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳಿವೆ. ಶಕ್ತಿ ಕೇಂದ್ರಗಳು ಮೊದಲಿಂದಲೂ ಇವೆ ಎಂಬುದನ್ನ ಜನ ಅರ್ಥ ಮಾಡಿಕೊಳ್ಳಬೇಕು ಎಂದರು.