“Breaking” ವಾಣಿಜ್ಯನಗರಿಯಲ್ಲಿ “ಕಮರ್ಷಿಯಲ್ ಲೀಕ್”- ಹೊರಗೋಡಿ ಬಂದು ಜೀವ ಉಳಿಸಿಕೊಂಡ ಕುಟುಂಬ…!!!

ಹುಬ್ಬಳ್ಳಿ: ಹೊಸದಾಗಿ ಬಂದ ಗ್ಯಾಸ್ ಆರಂಭಿಸಲು ಹೋದ ಸಮಯದಲ್ಲಿ ಬೆಂಕಿ ತಗುಲಿದ ಪರಿಣಾಮ, ಹೊರಗೋಡಿ ಬಂದು ಕುಟುಂಬವೊಂದು ಜೀವ ಉಳಿಸಿಕೊಂಡ ಘಟನೆ ಹುಬ್ಬಳ್ಳಿಯ ನ್ಯೂ ಕಾಟನ್ ಮಾರ್ಕೆಟ್‌ನಲ್ಲಿ ನಡೆದಿದೆ.
ಕಲಬುರ್ಗಿ ನೂಲ್ವಿ ಮೆಜೆಸ್ಟಿಕ್ ಎಂಬ ಹೆಸರಿನ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಕಾವಲುಗಾರನ ಮನೆಯಲ್ಲಿ ಘಟನೆ ನಡೆದಿದೆ. ಈ ಸಮಯದಲ್ಲಿ ಮನೆಯಲ್ಲಿದ್ದ ಕಾವಲುಗಾರ ಪ್ರಕಾಶ ಕಾಂಬ್ಳೆ ಕುಟುಂಬ ಹೊರಗಡೆ ಬಂದು ಪ್ರಾಣ ಉಳಿಸಿಕೊಂಡಿದೆ.
ಎಕ್ಸಕ್ಲೂಸಿವ್ ವೀಡಿಯೋ…
ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ, ಆಗುತ್ತಿದ್ದ ಬಹುದೊಡ್ಡ ಅವಘಡವನ್ನ ತಪ್ಪಿಸಿದ್ದಾರೆ. ಕಾಂಪ್ಲೆಕ್ಸ್‌ನಲ್ಲಿ ಹಲವು ಕಚೇರಿಗಳಿದ್ದು, ಆ ಸಿಬ್ಬಂದಿಗಳು ಕೂಡಾ ಆತಂಕದಿಂದ ಹೊರಗಡೆ ಬಂದಿದ್ದು ಕಂಡು ಬಂದಿತು.
ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವ ಬಗ್ಗೆ ಅನುಮತಿ ಪಡೆಯಲಾಗಿತ್ತಾ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.