ಕಲಘಟಗಿ: ಪಿಡಿಓಯೋರ್ವರ ಕಾನೂನು ಬಾಹಿರ ಚಟುವಟಿಕೆ… ವರ್ಗಾವಣೆ ಮಾಡಿದ ನಂತರವೂ ನಿಲ್ಲದ ಹಣ ವರ್ಗಾವಣೆ…!!!

ಧಾರವಾಡ: ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಾಡಿದ ಆದೇಶವನ್ನ ಪಾಲಿಸದ ಪಿಡಿಓಯೋರ್ವರು ಪಂಚಾಯತಿಯಲ್ಲಿ ಬಿಲ್ ತೆಗೆಯುವುದನ್ನ ನಿಲ್ಲಿಸದೇ ಇರುವುದು ಕಂಡುಬಂದರೂ, ಇಓ ತಮ್ಮ ಅಧಿಕಾರ ಮರೆತು ಕೂತಿರುವ ಪ್ರಸಂಗ ಕಲಘಟಗಿಯಲ್ಲಿ ನಡೆದಿದೆ.
ಉಗ್ನಿಕೇರಿ ಗ್ರಾಮ ಪಂಚಾಯತಿ ಪಿಡಿಓ ಯಂಕಪ್ಪ ಹೊಟ್ಟಿಗೌಡರ ಅವರನ್ನ ಜುಲೈ 16ರಂದು ವರ್ಗಾವಣೆ ಮಾಡಿ ಇಓ ಪಿ.ವೈ.ಸಾವಂತ ಆದೇಶ ಹೊರಡಿಸಿದ್ದರು. ಅದಾದ ನಂತರ, ಉಗ್ನಿಕೇರಿ ಪಂಚಾಯತಿಯ ಕೆಲ ಸದಸ್ಯರು ಮತ್ತೂ ಕೆಲ ಪಂಚಾಯತಿ ಸದಸ್ಯರ ಮಕ್ಕಳು ಪತ್ರಿಕಾಗೋಷ್ಠಿ ನಡೆಸಿ, ಹೊಟ್ಟಿಗೌಡರ ಇರಬೇಕು ಎಂದು ಒತ್ತಾಯಿಸುವ ಯತ್ನ ಮಾಡಿದರು.
ಮಾತನಾಡಿರುವ ವೀಡಿಯೋ…
ಸೋಜಿಗವೆಂದರೇ, ಈಗ ಗಳಗಿಹುಲಕೊಪ್ಪ ಗ್ರಾಪಂನಿಂದ ಉಗ್ನಿಕೇರಿಗೆ ವರ್ಗಾವಣೆ ಆಗಿರುವ ಮನಿಯಾರ ಎಂಬ ಪಿಡಿಓಗೆ ಉಗ್ನಿಕೇರಿ ಪಂಚಾಯತಿ ನೀಡಿ ಮೂರು ವರ್ಷವಾಗಿದ್ದರೂ, ಅವರನ್ನ ಹಲವು ಪಂಚಾಯತಿಗಳಿಗೆ ವರ್ಗಾವಣೆ ಮಾಡಲಾಗಿತ್ತು. ಈಗ ಮೂಲ ಪಂಚಾಯತಿ ನೀಡಲಾಗಿದೆ.
ಇದೇಲ್ಲದರ ನಡುವೆಯೂ ವರ್ಗಾವಣೆಯಾದ ನಂತರವೂ ಹೊಟ್ಟಿಗೌಡರ ಎಂಬ ಪಿಡಿಓ ಲಕ್ಷಾಂತರ ರೂಪಾಯಿ ಬಿಲ್ ಮಾಡಿರುವ ಪ್ರಕರಣವೂ ಬೆಳಕಿಗೆ ಬಂದಿದೆ. ಇಷ್ಟೇಲ್ಲ ನಡೆದರೂ, ಇಓ ಸಾವಂತ ತಮ್ಮ ಅಧಿಕಾರ ಮರೆತು ಕೂತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಸುವುದಕ್ಕೆ ಕೆಲ ಅಧಿಕಾರಿಗಳು ಜಾತಿವಾರು ಪ್ರಯತ್ನವನ್ನ ಮಾಡುತ್ತಿರುವುದು ಕಾಣತೊಡಗಿದ್ದು, ಸಚಿವ ಸಂತೋಷ ಲಾಡ್ ಅವರು ಇಂತಹ ಐನಾತಿಗಳಿಗೆ ದಕ್ಷ ಅಧಿಕಾರಿಗಳ ಮೂಲಕ ಪಾಠ ಕಲಿಸುವುದು ನಿಶ್ಚಿತ ಎನ್ನಲಾಗುತ್ತಿದೆ.