‘ಮತ್ತೆ ಮೊದಲಿಂದ’ ಗೀತ ಗುಚ್ಛದ 3ನೇ ಹಾಡು ‘ಉನ್ಮಾದ ಉಕ್ಕಿದಾಗ…’ ಬಿಡುಗಡೆ….

ಪಂಚರಂಗಿ ಯೂ ಟ್ಯೂಬ್ ಚಾನಲ್’ನ ಮತ್ತೆ ಮೊದಲಿಂದ ಗೀತ ಗುಚ್ಛದ ‘ಉನ್ಮಾದ ಉಕ್ಕಿದಾಗ…’ (ಕಾಮದ ಬಣ್ಣ ಕೆಂಪು) 3ನೇ ಹಾಡನ್ನು ನಟಿ ರಾಗಿಣಿ ದ್ವಿವೇದಿ ಬಿಡುಗಡೆ ಮಾಡಿ ಗಝಲ್ ಶೈಲಿಯ ಈ ಹಾಡನ್ನು ಮೆಚ್ಚಿಕೊಂಡರು.
ಯೋಗರಾಜ್ ಭಟ್ ರವರ ಸಾಹಿತ್ಯವಿರುವ ಈ ಹಾಡಿಗೆ ಚೇತನ್ – ಡ್ಯಾವಿ ಜೋಡಿ ಸಂಗೀತ ನೀಡಿದ್ದಾರೆ. ಈ ಗೀತೆ ಹೆಣ್ಣು ಹಾಗೂ ಗಂಡು ದನಿಯ ಎರಡೂ ಆವೃತ್ತಿಯಲ್ಲಿ ಮೂಡಿಬಂದಿರುವುದು ವಿಶೇಷ.
ಗಂಡು ಆವೃತ್ತಿಗೆ ಖ್ಯಾತ ಗಾಯಕ ಹೇಮಂತ್ ಕುಮಾರ್ ದನಿಯಾದರೆ ಹೆಣ್ಣು ದನಿ ಬಾಗಲಕೋಟೆ ಮೂಲದ ನೂತನ ಪ್ರತಿಭೆ ಅದಿತಿ ಖಂಡೇಗಲ ಅವರದ್ದಾಗಿದೆ. ರೇಣುಕಾ ಯೋಗರಾಜ್ ಭಟ್, ಶ್ರೀನಿಧಿ ದರ್ಬೆ, ಶಿಲ್ಪ ಪ್ರಸನ್ನ ಅವರು ಈ ಅಲ್ಬಮ್ ನಿರ್ಮಾಣ ಮಾಡಿದ್ದಾರೆ.