ಅಪ್ಪು ಕಪ್’ ಸೀಸನ್ 3 ಜರ್ಸಿ ಅನಾವರಣ… ಅಖಾಡಾದಲ್ಲಿ 10 ತಂಡಗಳು…

ಚೇತನ್ ಸೂರ್ಯ ಅವರ STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ ‘ಅಪ್ಪು ಕಪ್’ (ಶಟಲ್ ಬ್ಯಾಡ್ಮಿಂಟನ್ ಟೂರ್ನಿ) ಎರಡು ಸೀಸನ್ ಅದ್ದೂರಿಯಾಗಿ ನಡೆದಿದೆ. ಇತ್ತೀಚೆಗೆ ಈ ಲೀಗ್ ನ ಉದ್ಘಾಟನೆ ಹಾಗೂ ಟೀಮ್ ಆಕ್ಷನ್ ಸಮಾರಂಭ ಅದ್ದೂರಿಯಾಗಿ ನೆರವೇರಿತ್ತು. ಅಶ್ವಿನಿ ಪುನೀತ್ ರಾಜಕುಮಾರ್, ವಿಧಾನ ಪರಿಷತ್ ಸದಸ್ಯರಾದ ಸರವಣ ಚಾಲನೆ ನೀಡಿದ್ದರು.
ಲೀಗ್ ನ ಪೂರ್ವಭಾವಿಯಾಗಿ ‘ಅಪ್ಪು ಸಂಭ್ರಮ’ ಸಮಾರಂಭ ಆಯೋಜಿಸಲಾಗಿದ್ದು, ಆ ಸಮಾರಂಭದಲ್ಲಿ ಜರ್ಸಿ ಅನಾವರಣ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯ ಸರವಣ ಜರ್ಸಿ ಅನಾವರಣ ಮಾಡಿದರು. ಚಿತ್ರರಂಗದ ಅನೇಕ ಗಣ್ಯರು, ಲೀಗ್’ನಲ್ಲಿ ಭಾಗವಹಿಸುತ್ತಿರುವ ಕಲಾವಿದರು. ತಂಡಗಳ ಮಾಲೀಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಜರ್ಸಿ ಅನಾವರಣ ಮಾಡಿ ಮಾತನಾಡಿದ ಸರವಣ ಅವರು, ‘ಚೇತನ್ ಸೂರ್ಯ ನೇತೃತ್ವದಲ್ಲಿ ಕಳೆದ ಎರಡು ಸೀಸನ್ ಗಳನ್ನು ಅದ್ದೂರಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಈ ಸೀಸನ್ ಸಹ ಅಷ್ಟೇ ಅದ್ದೂರಿಯಾಗಿ ನಡೆಸುತ್ತಾರೆ ಎಂಬ ಭರವಸೆ ಇದೆ. ನಮ್ಮ ಸಾಯಿ ಗೋಲ್ಡ್ ಸಂಸ್ಥೆಯಿಂದ ಹತ್ತು ಲಕ್ಷ ರೂಪಾಯಿಗಳನ್ನು ಈ ಸೀಸನ್ ಗೆ ನೀಡುತ್ತಿದ್ದೇನೆ. ಜೊತೆಗೆ ಭಾಗವಹಿಸುವ ಪ್ರತಿಯೊಬ್ಬರಿಗೂ ಸಾಯಿ ಗೋಲ್ಡ್ ಪ್ಯಾಲೆಸ್ ವತಿಯಿಂದ ಗಿಫ್ಟ್ ವೋಚರ್ ಸಹ ನೀಡಲಾಗುವುದು’ ಎಂದು ತಿಳಿಸಿದರು.
STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ ‘ಅಪ್ಪು ಕಪ್’ ಸೀಸನ್ 3 ಅದ್ದೂರಿಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಇಂದು ಸರವಣ ಅವರಿಂದ ಜರ್ಸಿ ಅನಾವರಣವಾಗಿದೆ. ಹತ್ತು ಕೆಜಿ ಕೂಕವಿರುವ ಅಪ್ಪು ಅವರ ಪ್ರತಿಮೆಯ ಈ ಬೆಳ್ಳಿ ಕಪ್ ಸತತ ಮೂರು ಸೀಸನ್ ಗಳನ್ನು ಗೆದ್ದ ತಂಡದ ಪಾಲಾಗುತ್ತದೆ. ಈ ಬಾರಿ ಸದ್ಯದಲ್ಲೇ ಬೆಂಗಳೂರಿನಲ್ಲಿ ಲೀಗ್ ಪಂದ್ಯಗಳು ಆರಂಭವಾಗಲಿದೆ. ಫೈನಲ್ ಪಂದ್ಯ ಗೋವಾದಲ್ಲಿ ನಡೆಯಲಿದೆ. ಅಪ್ಪು ಕಪ್ ಯಶಸ್ವಿಯಾಗಲು ಸಹಕಾರ ನೀಡುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್, ಸಾಯಿ ಗೋಲ್ಡ್ ಪ್ಯಾಲೆಸ್ ನ ಸರವಣ ಅವರು ಸೇರಿದಂತೆ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ’ ಎಂದರು ಪಂದ್ಯಾವಳಿ ಆಯೋಜಕ ಚೇತನ್ ಸೂರ್ಯ.
ಅಪ್ಪು ಕಪ್ ಸೀಸನ್ 3 ರಲ್ಲಿ ಭಾಗವಹಿಸುತ್ತಿರುವ ತಂಡಗಳ ವಿವರ
1) “ವೀರ ಕನ್ನಡಿಗ ಬುಲ್ಸ್” ಮಾಲೀಕರು ಮೊನೀಶ್ ಸಿ, ನಾಯಕ ದಿಲೀಪ್ ರಾಜ್ ಹಾಗೂ ಸ್ಟಾರ್ ರಾಯಭಾರಿ ಸೃಜನ್ ಲೋಕೇಶ್.
2) ಬಿಂದಾಸ್ ರಾಯಲ್ ಚಾಲೆಂಜರ್ಸ್ ಮಾಲೀಕರು ಪರಿತೋಷ್ ಮೂರ್ತಿ, ನಾಯಕ ದಿಗಂತ್, ಸ್ಟಾರ್ ರಾಯಭಾರಿ ಅವಿನಾಶ್ ದಿವಾಕರ್.
3) “ಜಾಕಿ ರೈಡರ್ಸ್” ಮಾಲೀಕರು ಶ್ರೀಹರ್ಷ, ನಾಯಕ ಮನೋರಂಜನ್ ರವಿಚಂದ್ರನ್, ಸ್ಟಾರ್ ರಾಯಭಾರಿ ಪ್ರಿಯಾಂಕ ಉಪೇಂದ್ರ.
4) “ಮೌರ್ಯ ಸ್ಟ್ರೈಕರ್ಸ್” ಮಾಲೀಕರು ವಿಜೇತ್, ನಾಯಕ ಪ್ರಮೋದ್ ಶೆಟ್ಟಿ, ಸ್ಟಾರ್ ರಾಯಭಾರಿ ರಾಜವರ್ಧನ್.
5)”ಯುವರತ್ನ ಚಾಂಪಿಯನ್ಸ್ ” ಮಾಲೀಕರು ದಿವ್ಯ ರಂಗೇನಹಳ್ಳಿ, ನಾಯಕ ಇಂದ್ರಜಿತ್ ಲಂಕೇಶ್, ಸ್ಟಾರ್ ರಾಯಭಾರಿ ಧನ್ಯ ರಾಮಕುಮಾರ್.
6) ಪವರ್ ಪೈತಾನ್ಸ್, ಮಾಲೀಕರು ರೂಪ, ನಾಯಕ ಸದಾಶಿವ ಶೆಣೈ, ಸ್ಟಾರ್ ರಾಯಭಾರಿ ಸಿಂಧೂ ಲೋಕನಾಥ್.
7)ಗಂಧದಗುಡಿ ವಾರಿಯರ್ಸ್ ಮಾಲೀಕರು ಸತೀಶ್ ಎಂ, ನಾಯಕ ಹರೀಶ್ ನಾಗರಾಜ್, ಸ್ಟಾರ್ ರಾಯಭಾರಿ ವಿಕ್ರಮ್ ರವಿಚಂದ್ರನ್.
8) “ಜೇಮ್ಸ್ ವಾರಿಯರ್ಸ್” ಮಾಲೀಕರು ಸತ್ಯ, ನಾಯಕ ರವಿಚೇತನ್, ಸ್ಟಾರ್ ರಾಯಭಾರಿ ಅನಿರುದ್ಧ ಜಟ್ಕರ್ .
9)”ದೊಡ್ಮನೆ ಡ್ರಾಗನ್ಸ್” ಮಾಲೀಕರು ಸುರೇಶ್ & ನಿರಂತರ ಗಣೇಶ್, ನಾಯಕ ಪ್ರವೀಣ್ ತೇಜ್, ಸ್ಟಾರ್ ರಾಯಭಾರಿ ವಸಿಷ್ಠ ಸಿಂಹ.
10) “ಅರಸು ಹಂಟರ್ಸ್”, ಮಾಲೀಕರು ಆನಂದ್, ನಾಯಕ ಭುವನ್ ಗೌಡ, ಸ್ಟಾರ್ ರಾಯಭಾರಿ ಇಮ್ರಾನ್ ಸರ್ದಾರಿಯಾ .