ಪತ್ರಿಕೆ ವಿತರಣೆ ಮಾಡುತ್ತಿದ್ದ ಶಾನು ಯಲಿಗಾರನಿಗೆ “ಉದಯೋನ್ಮುಖ ಪತ್ರಕರ್ತ” ಪ್ರಶಸ್ತಿ ಘೋಷಣೆ….

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದಿಂದ ಕೊಡಮಾಡುವ ಪ್ರಸ್ತಕ ವರ್ಷದ ‘ಉದಯೋನ್ಮುಖ ಪತ್ರಕರ್ತ’ ಪ್ರಶಸ್ತಿಗೆ ಶಾನು ಯಲಿಗಾರ ಭಾಜನರಾಗಿದ್ದಾರೆ. ಇವರು ಮೂಲತಃ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ನಿವಾಸಿ ಇವರ ತಂದೆ ಮಕ್ತುಮಸಾಬ ಯಲಿಗಾರ, ತಾಯಿ ಮೆಹಬೂಬಿ ಯಲಿಗಾರ ಇವರ ಮೂಲ ಕಸುಬು ವ್ಯವಸಾಯ.
ಹುಟ್ಟು ಬೆಳೆದಿದ್ದು ಯರಗುಪ್ಪಿ ಗ್ರಾಮ. ಈ ಗ್ರಾಮದ ವಿಶೇಷತೆ ಬಗ್ಗೆ ತಿಳಿಸಬೇಕಾಗುತ್ತದೆ. ಅದೇನಂದರೆ ರಾಜಕೀಯ ತವರೂರು, ಸಂಗೀತ ತಜ್ಞರು, ಸೂಪಿ ಸಂತರು ಶರೀಫ ಶಿವಯೋಗಿಯ ಹಾಡಿ ಕುಣಿದು ಸ್ಥಳ ಇದು, ಈ ಗ್ರಾಮದಲ್ಲಿ ಜನಿಸಿದ್ದು ಸಂತೋಷದ ವಿಷಯ. ಇದೀಗ ಉದಯೋನ್ಮುಖ ಪ್ರಶಸ್ತಿಗೆ ಭಾಜನರಾಗಿರುವುದು ಸಂತೋಷದ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.
ವ್ಯಾಸಂಗ 1 ರಿಂದ 10 ನೇ ತರಗತಿ ವರೆಗೆ ಶಾಲಾ ಶಿಕ್ಷಣ ಪೂರ್ಣಗೊಳಿಸಿ, ನಂತರ ಎರಡು ವರ್ಷ ಐಟಿಐ, ನಂತರ ಡಿಪ್ಲೊಮಾ ಎಲೆಕ್ಟ್ರಾನಿಕ್ ಕಮುೂನಿಕೇಷನ್‌ದಲ್ಲಿ ಅನುತ್ತೀರ್ಣವಾದ ಬಳಿಕೆ ಬಿಎ ಪದವಿ ಪ್ರತಿಕೋದ್ಯಮದಲ್ಲಿ ಆಸಕ್ತಿ ವಹಿಸಿ ಇದೀಗ ಸಾಮಾಜಿಕ ಹೊಣೆಗಾರಿಕೆ ಹೊತ್ತು ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪತ್ರಕರ್ತನಾಗುವ ಆಸೆ: ಫೇಸ್ ಬುಕ್ ಖಾತೆಯಲ್ಲಿ ”ಶುದ್ದ ಕುಡಿಯುವ ನೀರಿಗಾಗಿ ಹಳ್ಳಿಯಿಂದ ಹಳ್ಳಿಗೆ ಅಲುದಾಡಿದರು ಶುದ್ದ ನೀರಿಲ್ಲ” ಎಂಬ ಅಂಶವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿತ್ತು. ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಅಂದೆ ಪತ್ರಿಕೋದ್ಯಮದಲ್ಲಿ ಪತ್ರಕರ್ತ ಆಗಬೇಕು ಎಂಬ ಹತಾಶೆ ಶಾನುಗೆ ಕಾಡ್ತಾ ಇತ್ತು.
ಬಳಿಕ ಸಂಯುಕ್ತ ಕರ್ನಾಟಕ, ವಿಜಯವಾಣಿ ಪತ್ರಿಕೆಯಲ್ಲಿ ಎರಡು ವರ್ಷ ಪತ್ರಿಕೆ ವಿತರಕರಾಗಿ ಕೆಲಸ ಮಾಡಿದ್ದಾನೆ. ಸಮಾಜದ ಅಂಕು ಡೊಂಕುಗಳನ್ನು ಪ್ರತಿಕೆ ಮುಖಾಂತರ ಜನರಿಗೆ ತಿಳಿಸಬೇಕು ಎಂಬುದು ಈತನಿಗೆ ಇರುವ ಹಂಬಲ.
ಇದಲ್ಲದೆ ಸರಕಾರದ ಯೋಜನೆಗಳು ಜನರಿಗೆ ತಲುಪಬೇಕು, ವಿವಿಧ ಇಲಾಖೆಯಗಳಲ್ಲಿ ಭ್ರಷ್ಟಾಚಾರ ಹೊರಗೆ ತರಬೇಕು, ಸಮಾಜದ ಹೊಣೆಗಾರಿಕೆ ಹೊತ್ತು ಕಾರ್ಯನಿರ್ವಹಿಸುಬೇಕು. ಚಿಂತನೆ ಮಾಡಿ ಈ ಒಂದು ವೇದಿಕೆ ಕಲ್ಪಿಸಿಕೊಂಡು ಸಾಮಾಜಿಕವಾಗಿ ಗುರುತಿಸಿಕೊಳ್ಳಬೇಕು ಎಂದು ಕಾರ್ಯನಿರ್ವಹಿಸುತ್ತಿದ್ದಾನೆ.
ಮನೆಯ ಉಪಜೀವನಕ್ಕೆ ಕಿರಾಣಿ ಅಂಗಡಿ ನಡೆಸುತ್ತಿರುವ ಇಂತಹ ಮನಸ್ಸಿನ ಪತ್ರಕರ್ತರು ಮುಖ್ಯ ವಾಹಿನಿಗೆ ಬರಬೇಕಿದೆ. ಈತನನ್ನ ಆಯ್ಕೆ ಮಾಡಿರುವ ಸಂಘವೂ ಉತ್ತಮ ನಿರ್ಧಾರ ಮಾಡಿದೆ.