ಕಲಘಟಗಿ “ಇಓ” ಆದೇಶಕ್ಕೆ ಬೆಲೆ ಕೊಡದ ಪಿಡಿಓ- ‘ಆ್ಯಕ್ಟ್’ ಗಾಳಿಗೆ ತೂರಿದ “ಹೊಟ್ಟಿಗೌಡರ”…!!!

ಧಾರವಾಡ: ಕಲಘಟಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ನೀಡಿದ ಆದೇಶವನ್ನ ಗಾಳಿಗೆ ತೂರಿ, ಪಿಡಿಓವೋರ್ವರು ಜನರನ್ನ ಜಿಲ್ಲಾ ಕಚೇರಿಗೆ ಕಳಿಸಿ ಲಾಬಿ ಆರಂಭಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಕಲಘಟಗಿಯ ತಾಲ್ಲೂಕು ಪಂಚಾಯತಿ ಇಓ ಪರಶುರಾಮ ಸಾವಂತ ಅವರು ಉಗ್ನಿಕೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯಂಕಪ್ಪಾ ಹೊಟ್ಟಿಗೌಡರ ಅವರನ್ನ ಗಳಗಿ ಹುಲಕೊಪ್ಪ ಪಂಚಾಯತಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿ, ಆರು ದಿನಗಳೇ ಕಳೆದಿವೆ. ಆದರೂ ಇಲ್ಲಿಂದ ಹೋಗುತ್ತಿಲ್ಲ.
ಸರಕಾರದ ನಿಯಮ ಉಲ್ಲಂಘಿಸಿ ಲಕ್ಷಾಂತರ ರೂಪಾಯಿ ಹಣವನ್ನ ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈಗಾಗಲೇ, ಪಿಡಿಓ ಹೊಟ್ಟಿಗೌಡರ, ಉಗ್ನಿಕೇರಿ ಪಂಚಾಯತಿಯಲ್ಲಿ ಜಾಂಡಾ ಊರಲು ಕೆಲವರಿಂದ ಲಾಬಿ ನಡೆಸುತ್ತಿದ್ದಾರೆ.
ಉಗ್ನಿಕೇರಿ ಪಂಚಾಯತಿಗೆ ಬಂದ ಮೂರೇ ತಿಂಗಳಲ್ಲಿ ಲಕ್ಷಾಂತರ ರೂಪಾಯಿಯನ್ನ ತೆಗೆಯಲಾಗಿದೆ. ಈ ಹಿಂದೆ ಕುಂದಗೋಳ ತಾಲೂಕಿನ ಶಿರೂರು ಗ್ರಾಪಂನಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿರುವ ಪ್ರಕರಣ ಇವರ ಮೇಲೆ ಬಾಕಿಯಿದೆ. ಇಷ್ಟೇಲ್ಲಾ ಇದ್ದರೂ, ಇಓ ಆದೇಶ ಪಾಲನೆ ಮಾಡದೇ ಇರುವುದು ಅಚ್ಚರಿಯ ವಿಷಯವಾಗಿದೆ. ಹೀಗಾಗಿ, ಇಓ ಸಾವಂತ ಅವರು ಸಿಇಓಗೆ ವಿಷಯ ತಿಳಿಸಿದ್ದು, ಪಿಡಿಓ ಹೊಟ್ಟಿಗೌಡರ ಅಮಾನತ್ತು ಆಗುವ ಸಾಧ್ಯತೆ ಕಂಡು ಬರುತ್ತಿದೆ.