ನವಲಗುಂದ ಕ್ಷೇತ್ರದಲ್ಲಿ “ಲ್ಯಾಂಡ್ ಆರ್ಮಿ”ಯಾಟ ರೊಚ್ಚಿಗೆದ್ದ ಗುತ್ತಿಗೆದಾರರಿಂದ ನಾಳೆ ಧರಣಿ….

ನವಲಗುಂದ: ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಅನುದಾನವನ್ನ ಲ್ಯಾಂಡ್ ಆರ್ಮಿಗೆ ಕೊಟ್ಟು ಗುತ್ತಿಗೆದಾರರಿಗೆ ತೀವ್ರ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ನಾಳೆ ಪಟ್ಟಣದಲ್ಲಿ ಧರಣಿ ಗುತ್ತಿಗೆದಾರರು ಮುಂದಾಗಿದ್ದಾರೆ.
ಹೌದು… ಜಿಲ್ಲಾ ಪಂಚಾಯತ ಮತ್ತು ತಾಲ್ಲೂಕು ಪಂಚಾಯತ ಅನುದಾನವನ್ನೂ ಕೆಆರ್‌ಡಿಐಎಲ್ ಮೂಲಕ ಮಾಡಿಸಲಾಗುತ್ತಿದೆ. ಈ ಮೂಲಕ ಗುತ್ತಿಗೆದಾರರು ತೊಂದರೆಗೆ ಒಳಗಾಗಿದ್ದಾರೆಂದು ಧರಣಿ ಮಾಡಲಿರುವವರು ತಿಳಿಸಿದ್ದಾರೆ.
ಗುತ್ತಿಗೆದಾರರು ತಾಲ್ಲೂಕು ಪಂಚಾಯತ ಆವರಣದಲ್ಲಿ ಧರಣಿ ನಡೆಸಲು ತೀರ್ಮಾನಿಸಿದ್ದು, ಲ್ಯಾಂಡ್ ಆರ್ಮಿಗೆ ಕಾಮಗಾರಿಗಳನ್ನ ವಹಿಸಿಕೊಟ್ಟ ಶಾಣ್ಯಾ ಉತ್ತರಿಸಬೇಕಿದೆ.