ಹುಬ್ಬಳ್ಳಿಯ “ಆ ಅಧಿಕಾರಿ” ಮನೆಯಲ್ಲಿ ಸಿಕ್ಕ ‘ಚಿನ್ನ,ಬೆಳ್ಳಿ,ಡಬ್ಬು’ ನೋಡಿದ್ರೇ ದಂಗಾಗ್ತೀರಿ…!!!

ಹುಬ್ಬಳ್ಳಿ: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕರ ದತ್ತನಗರದಲ್ಲಿರುವ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಅಧಿಕಾರಿಗಳೇ ದಂಗಾಗುವಷ್ಟು ಚಿನ್ನ, ಬೆಳ್ಳಿ, ನಗದು ದೊರೆತಿವೆ
ಅಧಿಕಾರಿ ಎಸ್.ಎಂ.ಚವ್ಹಾಣರ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. ಸದ್ಯ ಏಣಿಕೆ ಮಾಡಿದ ಹಣ 52 ಲಕ್ಷಗಳಾಗಿವೆ. ಏಣಿಕೆ ಕಾರ್ಯ ಇನ್ನೂ ಮುಂದುವರೆದಿದೆ. ಇಲ್ಲಿಯವರೆಗೂ ಒಂದು ಕೆಜಿ ಚಿನ್ನ, 3 ಕೆಜಿಯಷ್ಟು ಬೆಳ್ಳಿ ಪತ್ತೆಯಾಗಿದೆ.
ಎಕ್ಸಕ್ಲೂಸಿವ್ ವೀಡಿಯೋ…
13 ಸೈಟ್, ಆರುವರೆ ಎಕರೆ ಜಮೀನು, ಮೂರು ಮನೆಗಳ ದಾಖಲೆಗಳು ಪತ್ತೆಯಾಗಿವೆ. ಶೇಖು ಚವ್ಹಾಣನನ್ನು ಹುಬ್ಬಳ್ಳಿಗೆ ಲೋಕಾಯುಕ್ತ ಅಧಿಕಾರಿಗಳು ಕರೆತಂದು ತಪಾಸಣೆ ನಡೆಸಿದ್ದಾರೆ. ಕೊಪ್ಪಳದಲ್ಲಿ ಚವ್ಹಾಣ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.